Sunday, August 14, 2022

Latest Posts

ಪುಟಾಣಿ ಮರಿಗೆ ಮೆಟ್ಟಿಲಿಳಿಯುವುದನ್ನು ಕಲಿಸಿದ ನಾಯಿ: ಮನಸ್ಸಿಗೆ ಮುದ ನೀಡುವ ದೃಶ್ಯ ವೈರಲ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಎಷ್ಟೋ ದೃಶ್ಯಗಳು ನಮ್ಮ ಮನಸ್ಸಿಗೆ ಬಹಳ ಆಪ್ತವಾಗಿಬಿಡುತ್ತದೆ. ನೋಡಿದಷ್ಟು ಮತ್ತೆ ಮತ್ತೆ ನೋಡುತ್ತಲೇ ಇರಬೇಕು ಅನಿಸುತ್ತದೆ. ಅಂತಹದೇ ದೃಶ್ಯವೊಂದು ಇದೀಗ ಭಾರೀ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇಲ್ಲಿ ದೊಡ್ಡ  ನಾಯಿಯೊಂದು ಮತ್ತೊಂದು ಪುಟಾಣಿ ನಾಯಿಗೆ ಮೆಟ್ಟಿಲುಗಳನ್ನು ಇಳಿಯುವ ಪಾಠ ಹೇಳಿಕೊಡುತ್ತಿರುವ ದೃಶ್ಯವಿದು.

ವಿಡಿಯೋದಲ್ಲಿ ಏನಿದೆ?

ರಕ್ಷಿಸಲ್ವಟ್ಟ ಪುಟಾಣಿ ನಾಯಿ ಮರಿಗೆ ತಾಯಿಹೃದಯದ ನಾಯಿಯೊಂದು ಮೆಟ್ಟಿಲು ಇಳಿಯುವುದನ್ನು ಕಲಿಸುತ್ತಿರುವ ವಿಡಿಯೋ ಇದಾಗಿದೆ. ಮೆಟ್ಟಿಲು ಇಳಿಯಲು ಆಗದೇ ಮೆಟ್ಟಿಲುಗಳೆ ಮೇಲೆ ನಿಂತಿರುವ ನಾಯಿ ಮರಿಯನ್ನು ಅಲ್ಲೇ ಇದ್ದ ಪಿಟ್ ಬುಲ್ ನಾಯಿ ಗಮನಿಸುತ್ತದೆ. ಜತೆಗೆ, ತಕ್ಷಣ ಪುಟಾಣಿಯ ನೆರವಿಗೆ ಬರುವ ಈ ಪಿಟ್ ಬುಲ್  ಪ್ರೀತಿಯ ಮಳೆಗರೆಯುತ್ತದೆ. ಜತೆಗೆ ತಾನೇ ಸ್ವತಃ ಮೆಟ್ಟಿಲನ್ನು ಇಳಿದು ತೋರಿಸಿಕೊಡುತ್ತದೆ. ಹೀಗೆ ಎರಡ್ಮೂರು ಸಲ ಈ ಶ್ವಾನ ಮೆಟ್ಟಿಲಿನಿಂದ ಇಳಿದು ಇದು ಮರಿಗೆ ಧೈರ್ಯ ತುಂಬುತ್ತದೆ. ಮರಿ ಕೂಡಾ ಒಂದೊಂದೇ ಮೆಟ್ಟಿಲನ್ನು ಇಳಿದು ಹೊಸ ಪಾಠವನ್ನು ಕಲಿಯುತ್ತದೆ.

@GoodNewsCorres1 ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ದೃಶ್ಯ ಅಪ್ಲೋಡ್ ಆಗಿದೆ. 49 ಸೆಕೆಂಡಿನ ದೃಶ್ಯ ಇದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss