ಕನಸು ನನಸಾಗುವ ದಿನ: ಇಂಧನ, ವಿದ್ಯುಚ್ಛಕ್ತಿಯಲ್ಲಿ ಸಂಚರಿಸುವ ಕಾರನ್ನು ಬಿಡುಗಡೆ ಮಾಡಿದ ಸಚಿವ ನಿತಿನ್ ಗಡ್ಕರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಫ್ಲೆಕ್ಸ್-ಫ್ಯೂಯಲ್ ಎಂಜಿನ್ ಹೊಂದಿರುವ ಭಾರತದ ಮೊದಲ ಕಾರನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬಿಡುಗಡೆ ಮಾಡಿದ್ದಾರೆ.
ಇದು ಪೆಟ್ರೋಲ್, ಎಥೆನಾಲ್ ಮತ್ತು ವಿದ್ಯುತ್ ಶಕ್ತಿಯ ಮಿಶ್ರಣದಿಂದ ಚಲಿಸುತ್ತದೆ.

ಈ ಕುರಿತು ರಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡ ಅವರು, ‘ಇಂದು ನಮ್ಮ ಕನಸು ನನಸಾಗಿದೆ. ಭಾರತದ ಮೊದಲ ಫ್ಲೆಕ್ಸಿ-ಫ್ಯೂಯಲ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ಸ್ (ಎಫ್‌ಎಫ್ವಿ-ಶೆವ್) ಅನ್ನು ಬಿಡುಗಡೆ ಮಾಡಲಾಯಿತು. ಇದು 100% ಪೆಟ್ರೋಲ್ ಮತ್ತು 20 ರಿಂದ 100% ಮಿಶ್ರಿತ ಎಥೆನಾಲ್ ಮತ್ತು ಎಲೆಕ್ಟ್ರಿಕ್ ಪವರ್ಟೇನ್ನೊಂದಿಗೆ ಚಲಿಸುತ್ತದೆ ಅಂತ ಹೇಳಿದ್ದಾರೆ.

ಫ್ಲೆಕ್ಸ್-ಫ್ಯೂಯಲ್ ಎಂಜಿನ್ ಮೂಲತಃ ಎಥೆನಾಲ್ ನೊಂದಿಗೆ ಪೆಟ್ರೋಲ್ ನಲ್ಲಿ ಒಂದಕ್ಕಿಂತ ಹೆಚ್ಚು ರೀತಿಯ ಇಂಧನದಲ್ಲಿ ಚಲಿಸಬಹುದು. ಈ ರೀತಿಯ ಎಂಜಿನ್ ಶೇಕಡಾ 100 ರಷ್ಟು ಪೆಟ್ರೋಲ್ ಅಥವಾ ಎಥೆನಾಲ್ ನಲ್ಲಿ ಚಲಿಸಲು ಸಹ ಸಮರ್ಥವಾಗಿದೆ. ಫ್ಲೆಕ್ಸ್-ಫ್ಯೂಯಲ್ ಎಂಜಿನ್ ಗಳು ಬ್ರೆಜಿಲ್ ನಂತಹ ಇತರ ದೇಶಗಳಲ್ಲಿಯೂ ಬಹಳ ಜನಪ್ರಿಯವಾಗಿವೆ.ಈ ರೀತಿಯ ಎಂಜಿನ್ ನ ಪ್ರಯೋಜನವೆಂದರೆ ನೀವು ಶುದ್ಧ ಪೆಟ್ರೋಲ್ ನಿಂದ ಎಥೆನಾಲ್ ಗೆ ಬದಲಾಯಿಸಬಹುದು. ಇದು ಶುದ್ಧ ಪೆಟ್ರೋಲ್ ಗಿಂತ ತುಂಬಾ ಅಗ್ಗವಾಗಿರುವುದರ ಜೊತೆಗೆ ಶುದ್ಧ ಇಂಧನವಾಗಿದೆ. ಫ್ಲೆಕ್ಸ್-ಇಂಧನಗಳ ಕಾರ್ಯಕ್ಷಮತೆಯು ಪೆಟ್ರೋಲ್ ಎಂಜಿನ್ ಗಳಿಗೆ ಹೋಲುತ್ತದೆ, ಆದ್ದರಿಂದ, ಸಿಎನ್ ಜಿಗಿಂತ ಭಿನ್ನವಾಗಿ, ಕಾರ್ಯಕ್ಷಮತೆ ಕಡಿಮೆಯಾಗುವುದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!