ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂದ್ರಯಾನ-3 ಉಡಾವಣೆ ಸಕ್ಸಸ್ ಆಗುತ್ತಿದ್ದಂತೆಯೇ ಚಂದ್ರಯಾನ-3 ಟೀಂ ಹೆಸರನ್ನು ಕೆಲವರು ಬೇಕಾಬಿಟ್ಟಿ ಬಳಸಿಕೊಳ್ಳುತ್ತಿದ್ದಾರೆ.
ಗುಜರಾತ್‌ನಲ್ಲಿ ವ್ಯಕ್ತಿಯೊಬ್ಬ ನಾನು ಚಂದ್ರಯಾನ-3 ರ ಲ್ಯಾಂಡರ್ ವಿನ್ಯಾಸ ಮಾಡಿದ್ದೇನೆ ಎಂದು ಹೇಳಿಕೊಂಡು ಟಿವಿಯಲ್ಲಿ ಸಂದರ್ಶನ ನೀಡಿದ್ದ ಫೇಕ್ ಸೈಂಟಿಸ್ಟ್‌ನ್ನು ಪೊಲೀಸರು ಬಂಧಿಸಿದ್ದಾರೆ.
ಮಿಥುಲ್ ತ್ರಿವೇದಿ ನಾನೊಬ್ಬ ವಿಜ್ಞಾನಿ, ಲ್ಯಾಂಡರ್ ಮಾಡ್ಯೂಲ್ ವಿನ್ಯಾಸ ಮಾಡಿದ್ದೇನೆ ಎಂದಿದ್ದಾರೆ. ಇಸ್ರೋ ನಕಲಿ ಅಪಾಯಿಂಟ್‌ಮೆಂಟ್ ಲೆಟರ್‌ನ್ನೂ ಈತ ಇಟ್ಟುಗೊಂಡಿದ್ದ. ಇಷ್ಟಲ್ಲದೇ ಮುಂದಿನ ಯೋಜನೆಗೂ ನಾನು ಸಂಶೋಧನಾ ವಿಜ್ಞಾನಿಯಾಗಿದ್ದೇನೆ ಎಂದು ಇಸ್ರೋ ಬಗ್ಗೆ ಕಟ್ಟುಕಥೆಗಳನ್ನು ಹೇಳುತ್ತಾ ಇಂಟರ್ವ್ಯೂ ನಡೆಸಿದ್ದಾನೆ. ಸದ್ಯಕ್ಕೆ ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದಾರೆ.