ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

Can we kiss? ಎಂದ ಅಭಿಮಾನಿಗೆ ಬಾಲಿವುಡ್ ನಟಿ ಕೊಟ್ಟ ಖಡಕ್ ಉತ್ತರ ಹೀಗಿದೆ..

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಸಿನಿಮಾ ತಾರೆಯರು ಆಗಾಗ ಇನ್ಸ್ಟಾಗ್ರಾಂನಲ್ಲಿ ಲೈವ್ ಬರೋದು, ಕ್ವೆಶ್ಚನ್ ಆನ್ಸರ‍್ಸ್ ಸೆಶನ್ ಮಾಡೋದು ಮಾಮೂಲಿ.. ಅದೇ ರೀತಿ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಕ್ವೆಶ್ಚನ್ ಆಂಡ್ ಆನ್ಸರ್ ಸೆಶನ್ ವೇಳೆ ಫ್ಯಾನ್ ಒಬ್ಬ ‘ನಾನು ನಿಮಗೆ ಮುತ್ತು ಕೊಡಬಹುದೇ’ ಎಂದು ಕೇಳಿದ್ದಾನೆ.
ಹೌದು.. ಮೊದಲಿಗೆ ನಿಮ್ಮ ಫೇವರೆಟ್ ಟ್ರಾವೆಲ್ಲಿಂಗ್ ಜಾಗ ಯಾವುದು, ಹೇರ್ ಕೇರ್ ರೊಟೀನ್ ಹೇಗಿದೆ ಎಂದೆಲ್ಲಾ ಕೇಳಿದ್ದಾರೆ.ನಂತರ ಅಭಿಮಾನಿಯೊಬ್ಬ ‘can we kiss’ಎಂದು ಕೇಳಿದ್ದಕ್ಕೆ ಜಾಹ್ನವಿ ಖಡಕ್ ಉತ್ತರವನ್ನು ನೀಡಿದ್ದಾರೆ.

Janhvi Kapoorಅಭಿಮಾನಿ ಪ್ರಶ್ನೆಗೆ ಮಾಸ್ಕ್ ಹಾಕಿರುವ ಫೋಟೋ ಹಾಕಿ ‘ನೋ ‘ಎಂದು ತಿಳಿಸಿದ್ದಾರೆ. ಹಾಗೆಯೇ ಅಭಿಮಾನಿಗಳು ‘ಯಾವ ರೀತಿ ಡಯಟ್ ಮಾಡುತ್ತೀರಾ’ ಎಂದು ಕೇಳಿದಾಗ ಕೈನಲ್ಲಿ ಐಸ್‌ಕ್ರೀಂ ಹಿಡಿದು ‘ದಿನಕ್ಕೆ ನಾಲ್ಕು ಸ್ಕೂಪ್ ಐಸ್‌ಕ್ರೀಂ ತಿನ್ನುತ್ತೇನೆ’ ಎಂದು ಬರೆದಿದ್ದಾರೆ. ಫ್ಯಾನ್‌ಗಳ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ಜಾಹ್ನವಿ ಕಪೂರ್‌ಗೆ ಆನ್‌ಲೈನ್‌ನಲ್ಲಿ ಪ್ರೀತಿಯ ಸುರಿಮಳೆ ಸುರಿದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss