ಹೊಸ ದಿಗಂತ ವರದಿ, ಹಾನಗಲ್:
ಸಾಲಬಾಧೆ ತಾಳಲಾರದೇ ರೈತನೋರ್ವ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ನೀರಲಗಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಲ್ಲನಗೌಡ ಗೌಡಪ್ಪಗೌಡ ಪಾಟೀಲ (52) ಮೃತ ದುರ್ದೈವಿಯಾಗಿದ್ದು, ಬೆಳೆ ಸಾಲ ಅಂತಾ ಹಾನಗಲ್ ಕೆನರಾ ಬ್ಯಾಂಕ್ ಮಾಸನಕಟ್ಟಿ ಶಾಖೆಯಲ್ಲಿ 5 ಲಕ್ಷ ರೂ, ಕೆಸಿಸಿ ಬ್ಯಾಂಕ್ ಹಾನಗಲ್ ಶಾಖೆಯಲ್ಲಿ 2 ಲಕ್ಷ ರೂ, ಎಮ್.ಜಿ.ಬ್ಯಾಂಕ್ ನರೆಗಲ್ ಶಾಖೆಯಲ್ಲಿ 2 ಲಕ್ಷ ರೂ ಸೇರಿ ಕೈಗಡ ಅಂತಾ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.
ಸಕಾಲದಲ್ಲಿ ಮಳೆಯಾಗದೇ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಕೈಕೊಟ್ಟ ಹಿನ್ನೆಲೆ ಸಾಲವನ್ನು ತೀರಿಸಲಾಗದೆ ಮನನೊಂದು ನೇಣಿಗೆ ಶರಣಾಗಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ