ಹೊಸ ದಿಗಂತ ವರದಿ ವಿಜಯಪುರ:
ಎರಡನೆಯ ಹೆಂಡತಿಯ ಮಾತು ಕೇಳಿ ಮೊದಲನೆಯ ಹೆಂಡತಿಯ ಮಗುವನ್ನು ತಂದೆಯೇ ಹತ್ಯೆಗೈದಿರುವ ಘಟನೆ ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾದಲ್ಲಿ ನಡೆದಿದೆ.
ಸುಮಿತ್ ವಿನೋದ ಚವ್ಹಾಣ ಹತ್ಯೆಯಾಗಿರುವ ಬಾಲಕ.
ಬಾಲಕನ ತಂದೆ ವಿನೋದ ಚವ್ಹಾಣ ಹಾಗೂ ಮಲತಾಯಿ ಸವಿತಾ ಚವ್ಹಾಣ, ಮೊಬೈಲ್ ಚಾರ್ಜರ್ ವೈಯರ್ ನಿಂದ ಬಾಲಕನ ಕತ್ತು ಹಿಸುಕಿ ಹತ್ಯೆಗೈದಿದ್ದಾರೆ ಎಂದು ಹೇಳಲಾಗಿದೆ.
ಮತ್ತೋರ್ವ ಮಗ ಸಂಪತ್ ವಿನೋದ್ ಚವ್ಹಾಣ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಲ್ಲದೇ, ಮೊದಲನೆಯ ಹೆಂಡತಿ ಅಸುನೀಗಿದ್ದು, ಬಾಲಕನ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.