ಹೊಸದಿಗಂತ ಆನ್ಲೈನ್ ಡೆಸ್ಕ್:
ಮಗಳು ಯಾರನ್ನಾದರೂ ಪ್ರೀತಿಸಿದರೆ ಒಪ್ಪಿ ಮದುವೆ ಮಾಡುವ ಪೋಷಕರೂ ಇದ್ದಾರೆ, ಅಂತೆಯೇ ಮಕ್ಕಳನ್ನು ಸಾಯಿಸುತ್ತೇವೆ ಆದರೆ ಮದುವೆ ಮಾಡಿಕೊಳ್ಳಲು ಬಿಡೋದಿಲ್ಲ ಎನ್ನುವ ಪೋಷಕರೂ ಇದ್ದಾರೆ.
ಪಾಕಿಸ್ತಾನದ ಮುಜಾಫರ್ ಗಢ್ನಲ್ಲಿ ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಮಗಳ ಜೀವನಕ್ಕೇ ತಂದೆ ಬೆಂಕಿಯಿಟ್ಟಿದ್ದಾನೆ.
ಮಗಳು ಮದುವೆಯಾಗಿ ಹೋದ ಇಡೀ ಕುಟುಂಬವನ್ನೇ ಬೆಂಕಿ ಇಟ್ಟು ಸರ್ವನಾಶ ಮಾಡಿದ್ದಾನೆ.
ಮನ್ಸೂರ್ ಹುಸೇನ್ ಎಂಬಾತ ತನ್ನ ಮಗಳ ಮನೆಗೆ ಬೆಂಕಿ ಇಟ್ಟಿದ್ದು, ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ನಾಲ್ವರು ಮೊಮ್ಮಕ್ಕಳು ಸಜೀವದಹನ ಆಗಿದ್ದಾರೆ.
ಮಕ್ಕಳಾದ ಫೌಜಿಯಾ ಬಿಬಿ ಮತ್ತು ಖುರ್ಷಿದ್ ಮಾಯ್ ಅವರ ಮನೆಗೆ ಬೆಂಕಿ ಇಟ್ಟಿದ್ದು, ಅದೃಷ್ಟವಶಾತ್ ಫೌಜಿಯಾ ಪತಿ ಬದುಕುಳಿದಿದ್ದಾರೆ. ಅವರು ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ. ಪ್ರೇಮವಿವಾಹವಾದ ಕಾರಣ ಎರಡೂ ಕುಟುಂಬದ ನಡುವೆ ದ್ವೇಷ ಇದ್ದು, ದ್ವೇಷದಿಂದ ನಡೆದ ಕೊಲೆ ಇದಾಗಿದೆ.