ಹೊಸ ದಿಗಂತ ವರದಿ, ಕಲಬುರಗಿ:
17 ವಷ೯ ಕಲಬುರಗಿಯಲ್ಲಿ ಮಾಧ್ಯಮದಲ್ಲಿ ಸೇವೆ ಸಲ್ಲಿಸಿದ ಸುಧೀರ್ಘ ಜೀವನದ ಸವಿ ನೆನಪುಗಳು ಮರೆಯುವ ಹಾಗಿಲ್ಲ ಎಂದು ನ್ಯೂಜ 18 ಹಿರಿಯ ವರದಿಗಾರ ಡಾ.ಶಿವರಾಮ ಅಸುಂಡಿ ಅಭಿಪ್ರಾಯ ಪಟ್ಟರು.
ಅವರು ನಗರದ ಪತ್ರಿಕಾ ಭವನದಲ್ಲಿ ಕನಾ೯ಟಕ ಕಾಯ೯ನಿರತ ಪತ್ರಕರ್ತರ ಸಂಘ,ಕಲಬುರಗಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ನಿಮ್ಮ ಪ್ರೀತಿ, ವಿಶ್ವಾಸ,ನಂಬಿಕೆ ನಾನು ಯಾವತ್ತು ಮರೆಯುವುದಿಲ್ಲ. ಮುಂದಿನ ದಿನಗಳಲ್ಲಿ ಹುಬ್ಬಳ್ಳಿ ಲಿ ಕೆಲಸ ಮಾಡುವ ಅನಿವಾರ್ಯತೆ ಬಂದ ಕಾರಣ ನಿಮ್ಮ ಎಲ್ಲರನ್ನೂ ಅಗಲಿ ನಿಮಿಂದ ದೂರವಾಗುತ್ತಿರುವೆ, ಆದರೆ ನಿಮ್ಮ ಹೃದಯದಿಂದಲ್ಲ ಎಂದರು.
ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ರಂಗಾಯಣ ದ ನಿದೇ೯ಶಕರು ಶ್ರೀ ಪ್ರಭಾಕರ ಜೋಶಿ, ರಾಜ್ಯ ಎಸ್ಸಿಎಸ್ಟಿ ಸಂಪಾದಕರು ಶ್ರೀ ದೇವೇಂದ್ರಪ್ಪ ಕಪನೂರ ಹಾಗೂ ನ್ಯೂಜ 18 ವರದಿಗಾರರಿಗೆ ಸನ್ಮಾನಿಸಿ ಬಿಳ್ಕೋಡಲಾಯಾತು.
ಈ ಸಂದರ್ಭದಲ್ಲಿ ಶ್ರೀಶೈಲ ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ವಿಜಯವಾಣಿ ಸ್ಥಾನಿಕ ಸಂಪಾದಕ ವಾದಿರಾಜ ವ್ಯಾಸಮುದ್ರ, ಸೇರಿದಂತೆ ಅನೇಕರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಸಮಾರಂಭದಲ್ಲಿ ಟಿ.ವಿ.ಶಿವಾನಂದ, ಸಂಘದ ಅಧ್ಯಕ್ಷ ಭವಾನಿ ಸಿಂಗ್ ಠಾಕೂರ್, ಮಣ್ಣೂರ, ಸೇರಿದಂತೆ ಅನೇಕ ಪತ್ರಕರ್ತರು ಉಪಸ್ಥಿತರಿದ್ದರು.