ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚನ್ನಪಟ್ಟಣದಲ್ಲಿ ಉಪಚುನಾವಣೆಯಲ್ಲಿ ಮಗನನ್ನು ಗಲ್ಲಿಸಲೇಬೇಕೆಂದು ಪಣ ತೊಟ್ಟಿರುವ ಹೆಚ್‌ಡಿ ಕುಮಾರಸ್ವಾಮಿ ಇಂದು ಕುಟುಂಬ ಸಮೇತರಾಗಿ ಹಾಸನಾಂಬೆ ದರುಶನ ಪಡೆದರು. ವೇಳೆ ಚನ್ನಪಟ್ಟಣದಲ್ಲಿ ಪುತ್ರ ನಿಖಿಲ್ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಮಾಡಿದರು.
ಬಳಿಕ ಸಿದ್ದೇಶ್ವರ ಸ್ವಾಮೀಜಿ ಅವರ ದರುಶನ ಪಡೆದುಕೊಂಡರು. ಈ ಸಂದರ್ಭಸಿದ್ದೇಶ್ವರ ಸ್ವಾಮಿಯ ಬಲಭಾಗದಿಂದ ಹೂ ಕೆಳಗೆ ಬಿದ್ದಿದೆ. ದೇವರ ಬಲಭಾಗದಿಂದ ಹೂ ಬೀಳುವುದನ್ನು ಅನಿತಾ ಅವರು ಕುಮಾರಸ್ವಾಮಿಗೆ ತೋರಿಸಿದರು. ಪ್ರಾರ್ಥನೆ ಮಾಡುವಾಗ ಹೂವು ಬೀಳುವುದು ಒಳ್ಳೆಯ ಸೂಚನೆಯಂತೆ. ಹೀಗಾಗಿ ಸಿದ್ದೇಶ್ವರ ಸ್ವಾಮಿ ಕುಮಾರಸ್ವಾಮಿಯವರಿಗೆ ಶುಭ ಸೂಚನೆ ನೀಡಿದ್ರಾ ಎನ್ನುವ ಕುತೂಹಲ ಹೆಚ್ಚಿಸಿದೆ.
ಪ್ರಾರ್ಥನೆ ಮಾಡುವಾಗ ಹೂವು ಬಿದ್ದಿರುವುದು ಶುಭ ಸೂಚನೆಯಾಗಿದೆ. ಹಾಗಾಗಿ ಸಿದ್ದೇಶ್ವರ ಸ್ವಾಮಿ ಹೆಚ್.ಡಿ.ಕುಮರಸ್ವಾಮಿಯವರಿಗೆ ಉಪಚುನಾವಣೆ ಹೊತ್ತಲ್ಲಿ ಹಾಗೂ ರಾಜಕೀಯವಾಗಿ ಶುಭ ಸೂಚನೆ ನೀಡಿದ್ದಾರೆ ಎಂದು ಎಲ್ಲೆಡೆ ಚರ್ಚೆಯಾಗುತ್ತಿದೆ.