ಹೊಸದಿಗಂತ ವರದಿ, ನಾಪೋಕ್ಲು:
ಸಮೀಪದ ಯವಕಪಾಡಿ ಗ್ರಾಮದ ಇಟ್ಟೀಕಂಡಿ ಅರಣ್ಯ ಪ್ರದೇಶದಲ್ಲಿ ಭಾನುವಾರ ಬೆಳಗಿನ ಜಾವ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು ಸುಮಾರು 35 ಎಕರೆ ಪ್ರದೇಶದಲ್ಲಿ ಬೆಂಕಿ ಆವರಿಸಿದೆ.
ಖಾಸಗಿ ಜಾಗ ಹಾಗೂ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸಂಜೆಯ ವೇಳೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಶ್ರಮವಹಿಸಿ ಕಾಡ್ಗಿಚ್ಚನ್ನು ತಹಬಂದಿಗೆ ತಂದಿದ್ದಾರೆ