ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಸಿಲಿನ ಧಗೆ ಯಾವ ಪರಿಯಾಗಿ ಜೀವ ಸಂಕುಲವನ್ನು ಕಾಡುತ್ತಿದೆ ಎಂಬುದಕ್ಕೆ ಇಲ್ಲಿರುವ ವಿಡಿಯೋವೇ ಸಾಕ್ಷಿ ನುಡಿಯುತ್ತದೆ!
ವಾನರ ಪಡೆಯೊಂದು ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡುತ್ತಾ ಸಮಯ ಕಳೆಯುತ್ತಿರುವ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಇದು ಮುಂಬೈ ಮಹಾನಗರದ ಬೊರಿವಲಿಯ ರಿಸಾರ್ಟ್‌ವೊಂದರ ದೃಶ್ಯ ಎನ್ನಲಾಗಿದ್ದು, ಎರಡು ಪೂಲ್‌ಗಳಲ್ಲಿ ಕೋತಿಗಳೆಲ್ಲಾ ಒಟ್ಟಾಗಿ ಸೇರಿ ಲೋಕದ ಪರಿವೆಯೇ ಇಲ್ಲದಂತೆ ಈಜಾಡುವ ಈ ದೃಶ್ಯವನ್ನು ಸೆಕೆಯಿಂದ ಪಾರಾಗಲು ಮನೆಯೊಳಗೆ ಸೇರಿ ಏಸಿ ಹಾಕಿಕೊಂಡು ಕುಳಿತ ಮಂದಿ ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದಾರೆ.
#Monkeys are back #swimming at #Raheja #Borivali
Enjoying the #MumbaiHeat @baxirahul @mumbaimatterz @RoadsOfMumbai pic.twitter.com/CG7vNFaT1f
— Mumbai March (@MumbaiMarch) May 1, 2024