ಆರ್‌ಸಿಬಿ ಮ್ಯಾಚ್‌ ಮಧ್ಯೆ ಪ್ರಿಯಕರನಿಗೆ ಪ್ರಪೋಸ್‌ ಮಾಡಿದ ಯುವತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕುತೂಹಲ ಕೆರಳಿಸಿದ್ದ ರಾಯಲ್‌ ಛಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿನ ನಗೆ ಬೀರಿ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಆದರೆ ಪಂದ್ಯದ ನಡುವೆ ನಡೆದ ಇನ್ನೊಂದು ಘಟನೆ ಸೋಷಿಯಲ್‌ ಮೀಡಿಯಾಗಳಲ್ಲಿ ಸಖತ್‌ ವೈರಲ್‌ ಆಗಿದೆ.

ಮಹಾರಾಷ್ಟ್ರ ಕ್ರಿಕೇಟ್‌ ಅಸೋಸಿಯೇಷನ್ ನ ಪುಣೆ ಸ್ಟೇಡಿಯಂಬನಲ್ಲಿ ನಡೆಯುತ್ತಿದ್ದ ಪಂದ್ಯದ ವೇಳೆ ಯುವತಿಯೋರ್ವಳು ತನ್ನ ಪ್ರಿಯಕರನಿಗೆ ಪ್ರಪೋಸ್‌ ಮಾಡುತ್ತಿರುವ ಫೋಟೋ ಗೆ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

ಸಿಎಸ್‌ಕೆ ಬ್ಯಾಟಿಂಗ್‌ ಮಾಡುತ್ತಿದ್ದ ಸಂದರ್ಭದಲ್ಲಿ ತನ್ನ ಮೊಣಕಾಲೂರಿ ಕೈಯಲ್ಲಿ ಉಂಗುರ ಹಿಡಿದು ತನ್ನ ಪ್ರಿಕರನಿಗೆ ʼವಿಲ್‌ ಯೂ ಮ್ಯಾರಿ ಮೀʼ ಎನ್ನುವ ಥರ ನಿಂತಿರುವ ದೃಶ್ಯಾವಳಿಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿವೆ. ಸದ್ಯ ಸೋಷಿಯಲ್‌ ಮೀಡಿಯಾಗಳಲ್ಲಿ ಈ ದೃಶ್ಯವು ಟ್ರೆಂಡ್‌ ಆಗಿದೆ. ಇವುಗಳನ್ನು ನೋಡಿದ ನೆಟ್ಟಿಗರಲ್ಲಿ ಕೆಲವು ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಪಡ್ಡೆ ಹುಡುಗರು ʼಸಿಕ್ಕರೆ ಇಂಥ ಹುಡುಗಿ ಸಿಗಬೇಕು ಗುರುʼ ಎಂದು ಅಲವತ್ತು ಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!