Thursday, August 11, 2022

Latest Posts

ಪೊಲೀಸ್ ಬಲೆಗೆ ಬಿದ್ದ ದರೋಡೆಗೆ ಹೊಂಚು ಹಾಕಿದ್ದ ಯುವಕರ ತಂಡ

ಹೊಸ ದಿಗಂತ ವರದಿ, ಶಿವಮೊಗ್ಗ:

ದರೋಡೆಗೆ ಹೊಂಚು ಹಾಕಿದ್ದ ಯುವಕರ ತಂಡವನ್ನು ದಸ್ತಗಿರಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಾಗರ ರಸ್ತೆಯ ವಾಜಪೇಯಿ ಬಡಾವಣೆ ಬಳಿಯ ಶಕ್ತಿ ನಗರದಲ್ಲಿ ಈ ತಂಡ ದಾರಿ ಹೋಕರನ್ನು ಅಡ್ಡಗಟ್ಟಿ ದರೋಡೆ ಮಾಡಲು ಹೊಂಚು ಹಾಕಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗೆ ಇಳಿದ ತುಂಗಾ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಟಿಪ್ಪು ನಗರದ ಅಬ್ದುಲ್ ಸಲಾಂ(22) ಹಾಗೂ ಸುಹೇಲ್ ಖಾನ್(23) ಬಂಧಿತ ಆರೋಪಿಗಳಾಗಿದ್ದಾರೆ. ಇವರುಗಳಿಂದ ಒಂದು ದ್ವಿಚಕ್ರ ವಾಹನ, ಖಾರದ ಪುಡಿ, ಮಾರಕಾಸ್ತ್ರ ವಶಕ್ಕೆ ಪಡೆಯಲಾಗಿದೆ. ಇನ್ನೂ ಮೂವರು ತಪ್ಪಿಸಿಕೊಂಡಿದ್ದಾರೆ.
ಡಿವೈಎಸ್‌ಪಿ ಪ್ರಶಾಂತ್ ಹಾಗೂ ಸಿಪಿಐ ದೀಪಕ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‌ಐ ತಿರುಮಲೇಶ್, ಸಿಬ್ಬಂದಿಗಳಾದ ಸಯ್ಯದ್ ಇಮ್ರಾನ್, ರಾಜು, ಕಾಂತರಾಜು, ಲಂಕೇಶ್, ರವೀಂದ್ರ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss