ಖ್ಯಾತ ನಟಿಯ ಫೇಸ್ಬುಕ್ ಖಾತೆಗೆ ಕನ್ನ ಹಾಕಿದ ಹ್ಯಾಕರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣ ಖಾತೆಗಳ ಹ್ಯಾಕ್ ದಿನೇ ದಿನೇ ಹೆಚ್ಚಾಗುತ್ತಿದ್ದು, ಅಸಭ್ಯ ಸಂದೇಶ, ವಿಡಿಯೋ, ಫೋಟೋ ಹಾಕುವ ಸಂಗತಿ ಹೊಸದೇನು ಅಲ್ಲ. ಇದೀಗ ಖ್ಯಾತ ನಟಿ ಒಬ್ಬರ ಫೇಸ್ಬುಕ್ ಅಕೌಂಟ್ ಹ್ಯಾಕ್ ಆಗಿದೆ.

ತೆಲುಗು ಚಿತ್ರರಂಗದ ಖ್ಯಾತ ನಟಿ ಹಾಗೂ ನಿರೂಪಕಿ ವಿಷ್ಣುಪ್ರಿಯಾ ಭೀಮನೇನಿ ಅವರ ಫೇಸ್ಬುಕ್ ಖಾತೆಯನ್ನು ಸೈಬರ್ ಕಳ್ಳರು ಹ್ಯಾಕ್ ಮಾಡಿದ್ದಾರೆ.ಅಲ್ಲದೆ ಅವರ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಲೀಕ್ ಮಾಡಿದ್ದಾರೆ.

ಈ ಬಗ್ಗೆ ವಿಷ್ಣುಪ್ರಿಯಾ, ಖಾತೆಯನ್ನು ಅನ್ ಫಾಲೋ ಮಾಡುವಂತೆ ಅಭಿಮಾನಿಗಳಿಗೆ instagram ಮೂಲಕ ಮನವಿ ಮಾಡಿದ್ದಾರೆ. ಜೊತೆಗೆ ಇದು ಹ್ಯಾಕರ್ ಗಳ ಕೃತ್ಯ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!