ಅಂಬುಲೆನ್ಸ್‌ ನೀಡದ ಆಸ್ಪತ್ರೆ: ಬೈಕ್‌ ನಲ್ಲೇ 50 ಕಿ.ಮೀ. ವರೆಗೆ ತಾಯಿಯ ಮೃತದೇಹ ಕೊಂಡೊಯ್ದ ಮಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ತಾಯಿಯ ಮೃತದೇಹವನ್ನು ವ್ಯಕ್ತಿಯೋರ್ವ ಸುಮಾರು 50 ಕಿಮೀ ದೂರ ಬೈಕ್‌ನಲ್ಲೇ ಕೊಂಡೊಯ್ದಿ ಘಟನೆ ಮಧ್ಯಪ್ರದೇಶದ ಶಾದೋಲ್‌ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಸರ್ಕಾರಿ ಆಸ್ಪತ್ರೆಯವರು ವಾಹನ ವ್ಯವಸ್ಥೆ ಮಾಡಲು ನಿರಾಕರಿಸಿದ್ದರಿಂದ ಅನಿವಾರ್ಯವಾಗಿ ಆತ ಶವ ಸಂಸ್ಕಾರಕ್ಕಾಗಿ ಬೈಕ್‌ನಲ್ಲೇ ಮೃತದೇಹವನ್ನು ತೆಗೆದುಕೊಂಡು ಹೋಗಿದ್ದಾನೆ.

ಅನುಪ್ಪುರ್‌ ನಿವಾಸಿಯಾಗಿದ್ದ ಜೈಮಂತ್ರಿ ಯಾದವ್‌ ಎಂಬ ಮಹಿಳೆ ಎದೆನೋವಿನಿಂದ ಬಳಲುತ್ತಿದ್ದು, ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಅಲ್ಲಿ ಹೆಚ್ಚಿನ ವ್ಯವಸ್ಥೆ ಇಲ್ಲದ ಕಾರಣ ಶಾಧೋಲ್‌ನ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಅವರ ಶವವನ್ನು ಸಂಸ್ಕಾರಕ್ಕಾಗಿ ಕೊಂಡೊಯ್ಯಲು ಆಸ್ಪತ್ರೆಯವರು ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡಿಕೊಟ್ಟಿಲ್ಲ. ತಮ್ಮ ಬಳಿ ವಾಹನವೇ ಇಲ್ಲವೆಂದು ಹೇಳಿದ್ದಾರೆ. ಖಾಸಗಿ ಆಂಬ್ಯುಲೆನ್ಸ್‌ ದುಬಾರಿಯಾಗಿದ್ದರಿಂದ ಅಷ್ಟು ಹಣ ಮಗನ ಬಳಿ ಇರಲಿಲ್ಲ. ಬಳಿಕ ಆತ ತಾಯಿಯ ಶವವನ್ನು ಬೆಡ್‌ ಶೀಟ್‌ನಲ್ಲಿ ಸುತ್ತಿ ಬೈಕ್‌ಗೆ ಕಟ್ಟಿಕೊಂಡು ಸಂಸ್ಕಾರಕ್ಕಾಗಿ ಕೊಂಡೊಯ್ದಿದ್ದಾನೆ.

ಸುಮಾರು 50 ಕಿ.ಮೀ. ದೂರ ತಾಯಿಯ ಮೃತದೇಹವನ್ನು ಬೈಕ್‌ನಲ್ಲೇ ತೆಗೆದುಕೊಂಡು ಹೋಗಿದ್ದಾನೆ. ಈ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗ್ತಿದ್ದಂತೆ ಘಟನೆ ಬೆಳಕಿಗೆ ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!