ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಸುರಿದ ಭಾರೀ ಮಳೆಯಿಂದ ವಿದ್ಯಾರಣ್ಯಪುರಂನಲ್ಲಿಹಳೆಯ ಮನೆಯೊಂದು ಕುಸಿದಿದೆ.
ಮನೆ ಕುಸಿತದಿಂದಾಗಿ ಅವಶೇಷಗಳ ಅಡಿಯಲ್ಲಿ ಹಲವು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ದಿಢೀರ್ ಸುರಿದಂತ ಮಳೆಯಿಂದಾಗಿ ಮಹಾಲಕ್ಷ್ಮೀ ಲೇಔಟ್ ನಲ್ಲಿ ಮನೆಗಳಿಗೆ ನೀರು ನುಗ್ಗಿ ಜಲಾವೃತಗೊಂಡಿದ್ದರೇ, ಕೆಆರ್ ಸರ್ಕಲ್ ಬಳಿಯ ಅಂಡರ್ ಪಾಸ್ ನಲ್ಲಿ ಕಾರೊಂದು ಸಿಲುಕಿ ಯುವತಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.
ಈ ಬೆನ್ನಲ್ಲೇ ಭಾರೀ ಮಳೆಯಿಂದಾಗಿ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಳೆಯ ಕಟ್ಟಡವೊಂದು ಕುಸಿದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದಾಗಿ ನಾಗರೀಕ ರಕ್ಷಣಾ ಇಲಾಖೆಯ ಪೋಟೋ ಹಂಚಿಕೊಂಡು ಎಎನ್ಐ ವರದಿ ಮಾಡಿದೆ.