SHOCKING | ಅಮೆರಿಕದಲ್ಲಿ ನಡುಗಿದ ಭೂಮಿ: ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆರಿಕದ ಟೆಕ್ಸಾಸ್ ನಲ್ಲಿ ಭಾರೀ ಭೂಕಂಪ ಸಂಭವಿಸಿದೆ. ಟೆಕ್ಸಾಸ್‌ನ ಮಿಡ್‌ಲ್ಯಾಂಡ್‌ನಲ್ಲಿ ನಿನ್ನೆ ಸಂಜೆ 5.35ಕ್ಕೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.4ರಷ್ಟಿತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಭೂಕಂಪದ ಕೇಂದ್ರ ಬಿಂದು ಮಿಡ್‌ಲ್ಯಾಂಡ್ ಪಟ್ಟಣದಿಂದ 22 ಕಿಮೀ ದೂರದಲ್ಲಿರುವುದಾಗಿ ಕಂಡುಬಂದಿದೆ. ಭೂಮಿಯ ಒಳಭಾಗದಲ್ಲಿ 9 ಕಿಲೋಮೀಟರ್ ಆಳದಲ್ಲಿ ಚಲನೆಗಳು ಸಂಭವಿಸಿವೆ ಎಂದು ಸಂಸ್ಥೆ ತಿಳಿಸಿದೆ. ಟೆಕ್ಸಾಸ್‌ನಲ್ಲಿ ಸಂಭವಿಸಿದ ನಾಲ್ಕನೇ ಅತಿ ದೊಡ್ಡ ಭೂಕಂಪ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ತಿಂಗಳ ಅವಧಿಯಲ್ಲಿ ಮಿಡ್‌ಲ್ಯಾಂಡ್‌ನಲ್ಲಿ ಇದು ಎರಡನೇ ಭೂಕಂಪವಾಗಿದೆ ಎಂಬುದು ಗಮನಾರ್ಹ. ಕಳೆದ ತಿಂಗಳ 16ರಂದು ಕೂಡ 5.3 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!