ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕನಿಗೆ ಒಂದು ರೂ. ಚಿಲ್ಲರೆ ನೀಡದ ಕಂಡೆಕ್ಟರ್‌ಗೆ ಗ್ರಾಹಕ ನ್ಯಾಯಾಲಯವು ಮೂರು ಸಾವಿರ ರೂ. ದಂಡ ವಿಧಿಸಿದೆ.
ಸೆಪ್ಟೆಂಬರ್ 11, 2019ರಂದು ಬೆಂಗಳೂರಿನ ಶಾಂತಿ ನಗರ ಬಸ್ ನಿಲ್ದಾಣದಿಂದ ಮೆಜೆಸ್ಟಿಕ್ ಬಸ್‌ನಲ್ಲಿ (ಬಸ್ ನಂಬರ್ 360 ಬಿ) ತುಮಕೂರಿನ ರಮೇಶ್ ನಾಯ್ಕ್ ಎಂಬ ಪ್ರಯಾಣಿಕರು ಪ್ರಯಾಣಿಸಿದ್ದರು. ಬಿಎಂಟಿಸಿ ವೋಲ್ವೊ ಬಸ್‌ನಲ್ಲಿ ಪ್ರಯಾಣಕ್ಕೆ 29 ರೂಪಾಯಿ ಟಿಕೆಟ್ ಪಡೆದಿದ್ದರು. ಅವರು 30 ರೂಪಾಯಿ ನೀಡಿದ್ದರು. ತದನಂತರ ಒಂದು ರೂಪಾಯಿ ಬಾಕಿ ಚಿಲ್ಲರೆಯನ್ನು ನೀಡುವಂತೆ ಮಹಿಳಾ ಕಂಡೆಕ್ಟರ್ ಬಳಿ ಕೇಳಿದ್ದಾರೆ. ಆದರೆ ಈ ವೇಳೆ ಕಂಡಕ್ಟರ್ ಬಾಕಿ ಕೊಡದೆ ಅಪಹಾಸ್ಯ ಮಾಡಿದ್ದಾರೆ.
ಈ ಕುರಿತು ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ ಪ್ರಯಾಣಿಕನಿಗೆ ಇದೀಗ ಪರಿಹಾರ ದೊರಕಿದೆ.
ಪ್ರತಿಯೊಬ್ಬ ಗ್ರಾಹಕನು ತಾನು ದುಡಿದ ಬಾಕಿ ಹಣವನ್ನು ಪಡೆಯಲು ಅರ್ಹನಾಗುತ್ತಾನೆ ಎಂದು ಗ್ರಾಹಕ ಕಾನೂನು ಹೇಳುತ್ತದೆ. ಅದು ಒಂದು ರೂ. ಆಗಿರಲಿ, ಒಂದು ಸಾವಿರ ಆಗಿರಲಿ, ಬಾಕಿ ಮೊತ್ತವನ್ನು ಪಡೆಯುವ ಅರ್ಹತೆ ಹೊಂದಿರುತ್ತಾನೆ.