ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರೋನಾ ನಂತರ ಬ್ಲ್ಯಾಕ್ ಫಂಗಸ್ನಿಂದ ಪತ್ನಿ ಮೃತಪಟ್ಟಿದ್ದು, ಮನನೊಂದ ಪತಿ ತನ್ನ ಮಕ್ಕಳಿಗೂ ವಿಷ ಹಾಕಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಬೋರ್ಗಲ್ ಗ್ರಾಮದ ಗೋಪಾಲ್ ಹದಿಮನಿ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಪತಿ.
ಪತ್ನಿ ಜಯಾ ಬ್ಲ್ಯಾಕ್ ಫಂಗಸ್ನಿಂದ ಮೃತಪಟ್ಟಿದ್ದರು. ಮಕ್ಕಳಾದ ಸಾಕ್ಷಿ,ಸೃಜನ, ಶ್ವೇತಾ ಹಾಗೂ ಸೌಮ್ಯಾ ಮೃತರು. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.