ಪತ್ನಿಯನ್ನು ಕೊಲ್ಲಲು ಪತಿ ಪ್ಲಾನ್‌, ಬಲಿಯಾಗಿದ್ದು ಅತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೆಲವೊಮ್ಮೆ ಜನರು ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಗೆ ಎಂತಹ ಘೋರ ಪರಿಣಾಮಗಳು ಸಂಭವಿಸುತ್ತವೆ ಎಂಬುದು ಆ ವೇಳೆ ತಿಳಿದಿರುವುದಿಲ್ಲ. ಮಧ್ಯಪ್ರದೇಶದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ತನ್ನ ಪತ್ನಿಯನ್ನು ಕೊಲ್ಲಲು ಪತಿ ರೂಪಿಸಿದ ಸಂಚಿಗೆ ಅತ್ತೆ ಬಲಿಯಾದ ಘಟನೆ ಮಧ್ಯಪ್ರದೇಶದ ಸೈಖೇಡಾ ಗ್ರಾಮದ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪತಿಯ ವಿಪರೀತ ಮದ್ಯಪಾನ ಮಾಡುವ ಚಟದ ಬಗ್ಗೆ ದಂಪತಿಗಳಿಗೆ ಆಗಾಗ್ಯೆ ಜಗಳವಾಗುತ್ತಿತ್ತು. ಭಾನುವಾರ ಅದೇ ವಿಷಯಕ್ಕೆ ಸಂಬಂಧಿಸಿದಂತೆ ದಂಪತಿಗಳು ಮತ್ತೆ ಜಗಳವಾಡಿದರು. ನಂತರ ಸಿಟ್ಟುಮಾಡಿಕೊಂಡ ಹೆಂಡತಿ ಮನೆ ಬಿಟ್ಟು ತಾಯಿಯ ಮನೆಗೆ ಹೋಗಿದ್ದಳು.
ಇದರಿಂದ ಕುಪಿತಗೊಂಡ ವ್ಯಕ್ತಿ ತನ್ನ ಅತ್ತೆಯ ಮನೆಗೆ ಬಂದು ಪತ್ನಿಯನ್ನು ಕೊಂದುಹಾಕಲು ಯೋಜನೆ ಮಾಡಿದ್ದ. ಅದಕ್ಕಾಗಿ ಪ್ಲಾನ್‌ ಮಾಡಿಕೊಂಡಿದ್ದ ಆತ ಕಬ್ಬಿಣದಿಂದ ಮಾಡಿದ ಮುಖ್ಯ ಪ್ರವೇಶ ಬಾಗಿಲಿಗೆ ವಿದ್ಯುತ್ ತಂತಿಯನ್ನು ಜೋಡಿಸಿ ತನ್ನ ಹೆಂಡತಿಯನ್ನು ಕೊಲ್ಲಲು ಯೋಜನೆ ರೂಪಿಸಿದ್ದ. ಆದರೆ, ಆ ಬಳಿಕ ಆಗಿದ್ದೇ ಬೇರೆ, ಆತನ ಪತ್ನಿಯ ಬದಲು 55 ವರ್ಷದ ಅತ್ತೆ ಬಾಗಿಲಿನ ಸಂಪರ್ಕಕ್ಕೆ ಬಂದು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ಘಟನೆ ನಂತರ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!