ಕೋಟಿ ಕೋಟಿ ಖರ್ಚು ಮಾಡಿ ಮನೆ ಕಟ್ಟುವವರಿಗೆ ಇದೊಂದು ದಾರಿದೀಪ: ಈ ವಾಸ್ತುಶಿಲ್ಪಿ ಕಲಾತ್ಮಕತೆಗೆ ತಲೆಬಾಗಲೇಬೇಕು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇರಳದ ಪತ್ತನಂತಿಟ್ಟದ ಜೋಸೆಫ್ ಮ್ಯಾಥ್ಯೂ ಕಳೆದ 14 ವರ್ಷಗಳಿಂದ ವಿನ್ಯಾಸ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸೃಜನಶೀಲ ವಿನ್ಯಾಸಗಳನ್ನು ಒದಗಿಸುವ ಮೂಲಕ ಮತ್ತು ಕ್ಲೈಂಟ್‌ನ ಅಗತ್ಯಗಳಿಗೆ ಅನುಗುಣವಾಗಿ ಅವುಗಳನ್ನು ಕಾರ್ಯಗತಗೊಳಿಸುವ ಮೂಲಕ ಹೆಸರು ಮಾಡಿದ್ದಾರೆ.

ಪ್ರತಿಯೊಬ್ಬ ವ್ಯಕ್ತಿಗೂ ಅವರದೇ ಆದ ಅಭಿರುಚಿ ಮತ್ತು ಆಸಕ್ತಿಯಂತೆ ಸ್ವಂತ ಮನೆ ನಿರ್ಮಾಣ ಮಾಡಬೇಕೆಂಬುದು ಕನಸು. ಈಗೆಲ್ಲಾ ಎಷ್ಟು ದುಬಾರಿ ಹಣ ಖರ್ಚು ಮಾಡಿದರೆ ಅಷ್ಟು ಅದ್ಭುತವಾದ ಮನೆ ನಿರ್ಮಾಣವಾಗುತ್ತದೆ ಎಂಬುದು ಎಲ್ಲರ ಕಾನ್ಸೆಪ್ಟ್.‌ ಆದರೆ, ಲಾರಿ ಬೇಕರ್ ವಾಸ್ತುಶಿಲ್ಪ ಮತ್ತು ವಿನ್ಯಾಸದ ಶೈಲಿಯಿಂದ ಹೆಚ್ಚು ಸ್ಫೂರ್ತಿ ಪಡೆದ ಅವರು ತನ್ನ ಸ್ವಂತ ಮನೆ ನಿರ್ಮಿಸುವಾಗ, ಸಾಧ್ಯವಾದಷ್ಟು ಪರಿಣಾಮಕಾರಿ ವೆಚ್ಚ ತಗಲದಂತೆ ಎಚ್ಚರಿಕೆ ವಹಿಸಿದ್ದಾರೆ. 4,500 ಚದರ ಅಡಿಗಳಷ್ಟು ವಿಸ್ತಾರವಾಗಿ, ಪತ್ತನಂತಿಟ್ಟದ ಎಡಮೋನ್‌ನಲ್ಲಿ 40 ಸೆಂಟ್ಸ್ ಭೂಮಿಯಲ್ಲಿ ವಿಶಿಷ್ಟವಾದ ರೀತಿಯಲ್ಲಿ ತಮ್ಮ ಮನೆಯಲ್ಲಿ ನಿರ್ಮಿಸಿದ್ದಾರೆ.

2015 ರಲ್ಲಿ ಪ್ರಾರಂಭವಾದರೂ, ತನ್ನ ಕನಸಿನ ಮನೆಯ ನಿರ್ಮಾಣ ಪೂರ್ಣಗೊಳಿಸಲು ಸುಮಾರು ಐದು ವರ್ಷಗಳನ್ನು ತೆಗೆದುಕೊಂಡಿದ್ದಾರೆ. ನೈಸರ್ಗಿಕವಾಗಿ ಸಿಗುವ ಹಳೆಯ ಮರ ಮತ್ತು ಕಲ್ಲುಗಳನ್ನು ಮರುಬಳಕೆ ಮಾಡಿ ಅತ್ಯದ್ಭುತವಾದ ಕನಸಿನ ಗೂಡು ರಚಿಸಿಕೊಂಡಿದ್ದಾರೆ. ವೆಚ್ಚ ಕಡಿಮೆ ಮಾಡಲು ಜೋಸೆಫ್ ಎರಡು ಹಳೆಯ ಕೆಡವಲ್ಪಟ್ಟ ಎರಡು ಶಾಲೆಗಳಿಂದ ಸುಮಾರು 8,000 ರೂಫ್ ಟೈಲ್ಸ್‌ ಹಾಗೂ ಮರದ ಸಲಕರಣೆಗಳು ಹಾಗೂ 45 ಲೋಡ್ ಕಲ್ಲುಗಳನ್ನು ಮನೆ ಗೋಡೆ ನಿರ್ಮಿಸಲು ಬಳಸಿದ್ದಾರೆ.

The walls of the house were built using reused roof tiles.

ವಿಶಾಲವಾದ ಎರಡು ಅಂತಸ್ತಿನ ಮನೆ ಸ್ವತಃ ಕಲಾಕೃತಿಯಂತೆ ಕಾಣುತ್ತದೆ, ಮರಗೆಲಸವು ಕೂಡಾ ಆಸಕ್ತಿದಾಯಕ ವಿನ್ಯಾಸ ಅಂಶಗಳೊಂದಿಗೆ ಎದ್ದು ಕಾಣುತ್ತದೆ. ಸ್ವತಃ ಶಿಲ್ಪಿಯಾಗಿರುವ ಜೋಸೆಫ್ ಒಳಾಂಗಣವನ್ನು(ಇಂಟೀರಿಯರ್) ಅಲಂಕರಿಸುವಾಗ ತಮ್ಮದೇ ಆದ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಈ ಮನೆಗೆ ಬಳಸಲಾದ ಸುಮಾರು 95 ಪ್ರತಿಶತದಷ್ಟು ಮರ ಹಳೆಯದಾಗಿದ್ದು, ಕೆಡವಲ್ಪಟ್ಟ ಶಾಲೆಯಿಂದ ಮರುಬಳಕೆಯಾಗಿದೆ. ಎಲ್ಲಾ ಬಾಗಿಲುಗಳು, ಕಿಟಕಿ ಮತ್ತು ಪೀಠೋಪಕರಣಗಳ ತುಣುಕುಗಳು ಕೂಡ ಮರುಬಳಕೆಯ ವಸ್ತುಗಳೇ…!

Staircase and balcony handrail made of steel mesh.

ನೆಲ ಅಂತಸ್ತಿನ ನೆಲಹಾಸನ್ನು ತಂದೂರ್ ಕಲ್ಲುಗಳು ಮತ್ತು ಟೈಲ್ಸ್ ಬಳಸಿ ಮಾಡಲಾಗಿದ್ದರೂ, ಮೊದಲ ಮಹಡಿ ಮತ್ತು ಅದಕ್ಕೆ ಜೋಡಿಸುವ ಮೆಟ್ಟಿಲುಗಳನ್ನು ತ್ಯಾಜ್ಯ ಮರದ ತುಂಡುಗಳನ್ನು ಬಳಸಿ ಮಾಡಲಾಗಿದೆ. ಮನೆಯ ಇನ್ನೊಂದು ವಿಶೇಷವೆಂದರೆ ಗೋಡೆಗಳಿಗೆ ಛಾವಣಿಯ ಅಂಚುಗಳನ್ನು ಬಳಸಿದ್ದಾರೆ. ಮನೆಯ ಹಿಂಭಾಗದಲ್ಲಿ ತೆರೆದ ಅಂಗಳದ ಸ್ಥಳವೂ ಇದೆ, ಅಲ್ಲಿ ಕುಳಿತು ವಿಶ್ರಾಂತಿ ಪಡೆಯಬಹುದು. 35,000 ಲೀಟರ್ ಸಾಮರ್ಥ್ಯದ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಸಹ ಸ್ಥಾಪಿಸಿದ್ದಾರೆ.

ಈ ಗಾತ್ರದ ಸಾಂಪ್ರದಾಯಿಕ ಕಾಂಕ್ರೀಟ್ ಮನೆಯನ್ನು ನಿರ್ಮಿಸಲು ಕನಿಷ್ಠ 1.2 ಕೋಟಿ ರೂಪಾಯಿ ವೆಚ್ಚವಾಗುತ್ತದೆ ಎಂದು ಜೋಸೆಫ್‌ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಪ್ರಕೃತಿಯ ಕೊಡುಗೆ ದಯೆ ಇರುವಾಗ ಇಷ್ಟು ವೆಚ್ಚ ಮಾಡುವುದಕ್ಕಿಂತ ಮರುಬಳಕೆ ಕಾನ್ಸೆಪ್ಟ್‌ ತುಂಬಾ ಉಪಯುಕ್ತವಾಗಿದೆ.

Inside Joseph's house at Edamon, Pathanamthitta

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!