ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೋರ್ಡಾನ್ ಗಡಿಯಿಂದ ಇಸ್ರೇಲ್‌ಗೆ ನುಸುಳಲು ಯತ್ನಿಸುತ್ತಿದ್ದ ಕೇರಳ ಮೂಲದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಹತ್ಯೆಯಾದ ವ್ಯಕ್ತಿಯನ್ನು ಥುಂಬಾ ನಿವಾಸಿ ಥಾಮಸ್ ಗೇಬ್ರಿಯಲ್ ಪೆರೇರಾ ಎಂದು ಗುರುತಿಸಲಾಗಿದ್ದು, ಗೇಬ್ರಿಯಲ್ ಸಾವನ್ನು ಭಾರತೀಯ ರಾಯಭಾರ ಕಚೇರಿ ದೃಢಪಡಿಸಿದೆ.
ಥಾಮಸ್ ಗೇಬ್ರಿಯಲ್ ಪ್ರವಾಸಿ ವೀಸಾದಲ್ಲಿ ಜೋರ್ಡಾನ್‌ಗೆ ಹೋಗಿದ್ದರು. ಆದರೆ ಅಲ್ಲಿಂದ ಅಕ್ರಮವಾಗಿ ಇಸ್ರೇಲ್‌ಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಜೋರ್ಡಾನ್ ಸೇನೆಯ ಗುಂಡೇಟಿನಿಂದ ಹತ್ಯೆಯಾಗಿದ್ದಾರೆ.
ಫೆ.5 ರಂದು ಥಾಮಸ್ ಇಸ್ರೇಲ್‌ಗೆ ಪ್ರಯಾಣ ಬೆಳೆಸಿದ್ದರು. ಫೆ.9ರ ವರೆಗೆ ಥಾಮಸ್ ತಮ್ಮ ಪತ್ನಿ ಕ್ರಿಸ್ಟಿನಾ ಜೊತೆ ಸಂಪರ್ಕದಲ್ಲಿದ್ದು, ತಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದರು. ಬಳಿಕ ಪತಿಯೊಂದಿಗೆ ಸಂಪರ್ಕ ಸಾಧ್ಯವಾಗಿರಲಿಲ್ಲ. ಆತಂಕಗೊಂಡ ಕ್ರಿಸ್ಟಿನಾ ತಮ್ಮ ಪತಿಯನ್ನು ಪತ್ತೆಹಚ್ಚುವಂತೆ ಅನಿವಾಸಿ ಕೇರಳೀಯರ ವ್ಯವಹಾರಗಳ ಇಲಾಖೆಗೆ ಮನವಿ ಮಾಡಿದ್ದರು. ಇದಾಗಿ ಫೆ.10ರಂದು ಥಾಮಸ್ ಹತ್ಯೆಯಾಗಿದ್ದರು.
ಸದ್ಯ ಥಾಮಸ್ ಮೃತದೇಹ ಇಸ್ರೇಲ್ನಲ್ಲಿದ್ದು, ಭಾರತೀಯ ರಾಯಭಾರ ಕಚೇರಿ ಮೃತದೇಹವನ್ನು ಭಾರತಕ್ಕೆ ತರಲು ಸಂತ್ರಸ್ತ ಕುಟುಂಬಕ್ಕೆ ಸಹಾಯ ಮಾಡುತ್ತಿದೆ.