ಉದ್ದನೆ ಸೆರಗಿನಿಂದ ಬೈಕ್ ಚಕ್ರಕ್ಕೆ ಸಿಕ್ಕಿಕೊಂಡ ಕಾಲು, ಸ್ವಲ್ಪ ಏಮಾರಿದ್ರೂ ಪ್ರಾಣಕ್ಕೇ ಕುತ್ತು!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ದುಪ್ಪಟ್ಟಾ, ಉದ್ದನೆಯ ಸೆರಗು, ಸ್ಟಾಲ್ ಹಾಕೋ ಹೆಣ್ಣುಮಕ್ಕಳು ಈ ಸುದ್ದಿಯನ್ನು ಗಂಭೀರವಾಗಿ ತೆಗೆದುಕೊಳ್ಳಿ. ಚಿಕ್ಕಮಗಳೂರಿನ ತರೀಕೆರೆಯ ಇಟ್ಟಿಗೆ ಗ್ರಾಮದ ಮಹಿಳೆಯೊಬ್ಬರ ಸೀರೆಯ ಸೆರಗು ಬೈಕ್ ಚಕ್ರಕ್ಕೆ ಸಿಲುಕಿದೆ, ಇದರಿಂದಾಗಿ ಕಾಲು ಸಿಲುಕಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೈಕ್ ಚಕ್ರಕ್ಕೆ ಕಾಲು ಸಿಕ್ಕಿಕೊಂಡು, ಸೆರಗು ಕೂಡ ಸಿಕ್ಕಿಕೊಂಡಿದ್ದು, ಮೈಮೇಲಿನ ಬಟ್ಟೆಯನ್ನೂ ನೋಡಿಕೊಳ್ಳುತ್ತಾ, ಸೆರಗನ್ನೂ ಬಿಡಿಸಲು ಮಹಿಳೆ ಹರಸಾಹಸ ಪಟ್ಟಿದ್ದಾರೆ. ರಸ್ತೆಯಲ್ಲೇ ನೋವಿನಿಂದ ನರಳಿದ್ದು, ಮೆಕ್ಯಾನಿಕ್ ಬೈಕ್‌ನ ಚೈನ್, ಗೇರ್‌ಬಾಕ್ಸ್ ತೆಗೆದ ನಂತರ ಮಹಿಳೆ ಕಾಲನ್ನು ಹೊರತೆಗೆಯಲಾಗಿದೆ.

ಸ್ವಲ್ಪ ಏಮಾರಿದ್ದರೂ ಜೀವಕ್ಕೇ ಅಪಾಯವಾಗುವ ಸಾಧ್ಯತೆ ಇತ್ತು. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!