Wednesday, June 29, 2022

Latest Posts

ಕಡಲತೀರದಲ್ಲಿ ಈಜಾಡಲು ತೆರಳಿ ಜೀವಾಪಾಯದಲ್ಲಿದ್ದ ಪ್ರವಾಸಿಗನನ್ನು ರಕ್ಷಿಸಿದ ಜೀವರಕ್ಷಕ ಸಿಬ್ಬಂದಿ

ಹೊಸದಿಗಂತ ವರದಿ,ಗೋಕರ್ಣ:

ಸಮುದ್ರದಲ್ಲಿ ಈಜಾಡಲು ತೆರಳಿ ಜೀವಾಪಾಯದಲ್ಲಿದ್ದ ಪ್ರವಾಸಿಗನನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಮಂಗಳವಾರ ಸಂಜೆ ರುದ್ರಪಾದ ಕಡಲತೀರದ ಬಳಿ ನಡೆದಿದೆ. ಹುಬ್ಬಳಿ ಮೂಲದ ದೇವರಾಜ ರಕ್ಷಣೆಗೆ ಒಳಗಾದ ಪ್ರವಾಸಿಗನಾಗಿದ್ದು, ಜೀವರಕ್ಷಕ ಸಿಬ್ಬಂದಿಗಳಾದ ವಿಠ್ಟಲ್ , ಮಂಜು ಜೀವರಕ್ಷಿಸಿದವರಾಗಿದ್ದಾರೆ. ಒಟ್ಟು ನಾಲ್ಕು ಜನರು ಹುಬ್ಬಳ್ಳಿಯಿಂದ ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದು, ಸಮುದ್ರದಲ್ಲಿ ಆಟವಾಡಲು ಹೋದಾಗ ಈ ಘಟನೆ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss