ಹೊಸದಿಗಂತ ಡಿಜಿಟಲ್ ಡೆಸ್ಕ್;
ನಿರ್ದೇಶಕ, ನಟ ನಾಗಶೇಖರ್ ಕಾರು ಅಪಘಾತವಾಗಿದ್ದು, ಘಟನೆಯಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್ ಬಳಿ ಈ ಘಟನೆ ನಡೆದಿದೆ.
ಕಾರು ಅಪಘಾತದ ಬಗ್ಗೆ ನಿರ್ದೇಶಕ ನಾಗಶೇಖರ್ ಸ್ಪಷ್ಟನೆ ನೀಡಿದ್ದು, ಕಾರಿನಲ್ಲಿ ಹೋಗುವಾಗ ಸ್ವಲ್ಪ ಕಣ್ಮುಚ್ಚಿದೆ. ಹಾಗಾಗಿ ಕಾರು ಅಪಘಾತವಾಗಿದೆ ಎಂದು ತಿಳಿಸಿದ್ದಾರೆ.
ಅಪಘಾತದಲ್ಲಿ ಓರ್ವ ಮಹಿಳೆಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಕಾರು ಚಲಾಯಿಸುವಾಗ ಸ್ವಲ್ಪ ಕಣ್ಮುಚ್ಚಿದೆ, ಪರಿಣಾಮ ಆಕ್ಸಿಡೆಂಟ್ ಆಗಿದೆ. ಕಾರಿಗೆ ಡ್ಯಾಮೇಜ್ ಆಗಿದೆ ಅದನ್ನು ಬಿಟ್ಟರೆ ನನಗೇನೂ ತೊದರೆಯಾಗಿಲ್ಲ ಎಂದು ತಿಳಿಸಿದ್ದಾರೆ.