ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿಯ ಬಜೆಟ್ ನಂತರ ಕಾಂಗ್ರೆಸ್ ಸರ್ಕಾರದಲ್ಲಿ ಹಲವು ಬದಲಾವಣೆ ಆಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಹೈಕಮಾಂಡ್ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯುತ್ತಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಕುರ್ಚಿ ಕಿತ್ತಾಟಕ್ಕೆ ಸುರ್ಜೇವಾಲ ತೇಪೆ ಹಚ್ಚೋಕೆ ಬಂದಿದ್ದಾರೆ. ಅವರು ಬಂದು ಹೋದ್ರು ಇದು ಸರಿ ಹೋಗೊಲ್ಲ. ಪವರ್ ಶೇರಿಂಗ್ ಬಗ್ಗೆ ಸ್ಪಷ್ಟತೆ ಆಗುವವರೆಗೂ ಈ ಗಲಾಟೆ ನಿಲ್ಲೋದಿಲ್ಲ. ಪವರ್ ಶೇರಿಂಗ್ ಸತ್ಯ ಗೊತ್ತಾಗೋವರೆಗೂ ಕಾಂಗ್ರೆಸ್ ನಲ್ಲಿ ಕುರ್ಚಿ ಕಾದಾಟ ಮುಂದುವರೆಯಲಿದೆ ಎಂದಿದ್ದಾರೆ.