Wednesday, October 5, 2022

Latest Posts

ಪ್ರೀತಿ ನಿರಾಕರಿಸಿದ್ದಕ್ಕೆ ಗುಂಡು ಹಾರಿಸಿದ ಪ್ರೇಮಿ: ಸಾವು-ಬದುಕಿನೊಂದಿಗೆ ಬಾಲಕಿ ಹೋರಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಗುಂಡಿಕ್ಕಿರುವ ಭಯಾನಕ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ ರಾಜಧಾನಿ ಪಾಟ್ನಾದ ಬುರೆ ಪೊಲೀಸ್ ಠಾಣೆಯ ಇಂದ್ರಪುರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಒಂಭತ್ತನೇ ತರಗತಿ ಓದುತ್ತಿರುವ ಬಾಲಕಿ ತರಕಾರಿ ಮಾರುವ ವ್ಯಕ್ತಿಯ ಮಗಳು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಘಟನೆಗೆ ಪ್ರೇಮ ಪ್ರಕರಣವೇ ಕಾರಣ ಎಂದು ಪೊಲೀಸರು ಪತ್ತೆ ಹಚ್ಚಿ, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಓರ್ವ ಯುವಕನೊಂದಿಗೆ ಪ್ರೀತಿಗೆ ಬಿದ್ದ ಬಾಲಕಿ ಬಳಿಕ ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ. ಇಬ್ಬರ ನಡುವೆ ವಾಗ್ವಾದ ನಡೆದು ಆ ಕೋಚಿಂಗ್‌ ಬಿಟ್ಟು ಬೇರೆ ಕೋಚಿಂಗ್ ಸೆಂಟರ್‌ಗೆ ಸೇರಿದ್ದಾಳೆ. ಇದರಿಂದ ಕುಪಿತಗೊಂಡ ಪ್ರಿಯಕರ ಯುವತಿಯ ಮೇಲೆ ಗುಂಡು ಹಾರಿಸಿದ್ದಾನೆ.

ಬುಧವಾರ ಸಂಜೆ ಬಾಲಕಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಆತ, ಬ್ಯಾಗ್‌ನಲ್ಲಿ ಗನ್ ಹಿಡಿದು ಹಿಂಬಾಲಿಸಿದ್ದಾನೆ. ಜನಸಂದಣಿ ಕಡಿಮೆ ಇರುವ ಪ್ರದೇಶಕ್ಕೆ ಬಂದ ಕೂಡಲೇ ಬಾಲಕಿಯ ಕುತ್ತಿಗೆಗೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಈ ದೃಶ್ಯ ಹತ್ತಿರದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!