Monday, August 8, 2022

Latest Posts

60ರ ವೃದ್ಧನ ವಿಕೃತ ಕಾಮ: ಬರೋಬ್ಬರಿ 30 ಬೀದಿ ನಾಯಿಗಳಿಗೆ ಚಿತ್ರಹಿಂಸೆ ನೀಡಿ ಅತ್ಯಾಚಾರ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮಹಾರಾಷ್ಟ್ರದ ತರಕಾರಿ ಮಾರುವ 60 ವರ್ಷದ ವೃದ್ಧನೊಬ್ಬ ಸುಮಾರು 30 ನಾಯಿಗಳ ಮೇಲೆ ಅತ್ಯಾಚಾರ ಎಸಗಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಜುಹು ಗಲ್ಲಿನಿವಾಸಿ ಅಹ್ಮದ್ ಶಾಹಿ ಆರೋಪಿ. ಈತ ಮುಂಬೈನ ಆಂಡೇರಿಯಲ್ಲಿ ನಾಯಿಗಳಿಗೆ ಚಿತ್ರಹಿಂಸೆ ನೀಡಿ ಅತ್ಯಾಚಾರ ಮಾಡುತ್ತಿರುವುದಾಗಿ ಅಲ್ಲಿನ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಮನೆಯಲ್ಲಿ ಒಬ್ಬನೇ ವಾಸಮಾಡುತ್ತಿರುವ ಅಹ್ಮದ್ ಶಾಹಿ ಇಂತಹ ಹೀನ ಕೃತ್ಯ ಎಸಗುತ್ತಿದ್ದು, ಇದನ್ನು ನೋಡಿದ ಸ್ಥಳೀಯ ನಿವಾಸಿಗಳು ಈ ರೀತಿ ಮಾಡಿದಂತೆ ಎಚ್ಚರಿಕೆ ನೀಡಿದ್ದರು. ಆದರೂ ಕೂಡ ಆತ ತನ್ನ ಕೃತ್ಯವನ್ನು ಮುಂದುವರೆಸಿರುವುದಾಗಿ  ಡಿ.ಎನ್.ನಗರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಎನ್ ಜಿಒ ಬಾಂಬೆ ಆ್ಯನಿಮಲ್ ರೈಟ್ಸ್ ನ ವಿಜಯ್ ಮೊಹ್ನಾನಿ ಅವರು ಅಹ್ಮದ್ ಶಾಹಿ ನಾಯಿಯ ಮೇಲೆ ಅತ್ಯಾಚಾರ ವೆಸಗುತ್ತಿರುವ ವಿಡಿಯೋವನ್ನು ಪೊಲೀಸರಿಗೆ ನೀಡಿದ ನಂತರ ಅಹ್ಮದ್ ನನ್ನು ಬಂಧಿಸಲಾಗಿದೆ.

ಎನ್ ಜಿಒ ಸಲ್ಲಿಸಿದ ಸಾಕ್ಷ್ಯಗಳನ್ನು ಆಧರಿಸಿ ಶಾಹಿ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದು, ಐಪಿಸಿ ಸೆಕ್ಷನ್ 377 (ಅಸ್ವಾಭಾವಿಕ ಲೈಂಗಿಕತೆ) ಸೇರಿದಂತೆ ಇತರೆ ಸೆಕ್ಷನ್ ಗಳ ಅಡಿಯಲ್ಲಿ ಆತನನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss