Saturday, December 9, 2023

Latest Posts

ಮಹೇಶ್ ಬಾಬು ಮನೆಯಲ್ಲಿ ಕಳ್ಳತನಕ್ಕೆ ಯತ್ನ: ಕಳ್ಳನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸೆಕ್ಯೂರಿಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಬುಧವಾರ ಬೆಳಗ್ಗೆ ವಿಧಿವಶರಾದ ವಿಚಾರ ಗೊತ್ತೇ ಇದೆ. ಇದಕ್ಕೂ ಮುನ್ನಾ ದಿನ ಕಳ್ಳನೊಬ್ಬ ಒಳನುಗ್ಗಲು ಯತ್ನಿಸಿ ಸೆಕ್ಯೂರಿಟಿ ಗಾರ್ಡ್‌ ಕೈಲಿ ತಗಾಲಾಕ್ಕೊಂಡಿದ್ದಾನೆ. ಮಂಗಳವಾರ ರಾತ್ರಿ 11.30ರ ವೇಳೆ ಜುಬ್ಲಿ ಹಿಲ್ಸ್ ರಸ್ತೆ ಸಂಖ್ಯೆ 81ರಲ್ಲಿರುವ ಮಹೇಶ್ ಬಾಬು ಮನೆಯಲ್ಲಿ ಕಳ್ಳತನ ಮಾಡಲು ಬಂದಿದ್ದ ವ್ಯಕ್ತಿಯೊಬ್ಬ ಬೇಲಿ ಏರಿ ಒಳಗೆ ಜಿಗಿದಿದ್ದಾನೆ. ಗೋಡೆ ತುಂಬಾ ಎತ್ತರವಾಗಿದ್ದು, ಕಳ್ಳ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ. ಶಬ್ಧ ಕೇಳಿದ ಮನೆಯ ಸೆಕ್ಯುರಿಟಿ ಸಿಬ್ಬಂದಿ ಹೋಗಿ ನೋಡಿದಾಗ ಕಳ್ಳ ಗಾಯಗೊಂಡು ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಳ್ಳನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸರು ಕಳ್ಳನನ್ನು ವಿಚಾರಣೆಗೊಳಪಡಿಸಿದಾಗ ಆತನ ಹೆಸರು ಕೃಷ್ಣ (30) ಎಂದು ತಿಳಿಸಿದ್ದು, ಮೂರು ದಿನಗಳ ಹಿಂದೆ ಒಡಿಶಾದಿಂದ ಬಂದು ನರ್ಸರಿ ಬಳಿ ವಾಸವಿದ್ದು, ಮಹೇಶ್ ಬಾಬು ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾಗಿ ತಿಳಿಸಿದ್ದಾನೆ. ಎತ್ತರದ ಗೋಡೆಯಿಂದ ಜಿಗಿದು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!