ಸಿಂದಗಿ ತಾಲೂಕಿನ ಹಚ್ಯಾಳ ಗ್ರಾಮದಲ್ಲಿ ವ್ಯಕ್ತಿಯ ಬರ್ಬರ ಹ*ತ್ಯೆ; ಜಮೀನಿನ ಶೆಡ್‌ನಲ್ಲಿ ಕೃತ್ಯ

ಹೊಸದಿಗಂತ ವರದಿ ಸಿಂದಗಿ: ತಾಲೂಕಿನ ಹಚ್ಯಾಳ ಗ್ರಾಮದ ಜಮೀನೊಂದರ ಪತ್ರಾಸ್ ಶೆಡ್‌ನಲ್ಲಿ ವ್ಯಕ್ತಿಯೊಬ್ಬರನ್ನು ಹರಿತವಾದ ಆಯುಧದಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಹಚ್ಯಾಳ ಗ್ರಾಮದ ಕರೆಪ್ಪ ಚಂದ್ರಾಮ ಬಿರಾದಾರ (55) ಕೊಲೆಯಾದ ವ್ಯಕ್ತಿ. ಇದನ್ನೂ ಓದಿ: ದುಷ್ಕರ್ಮಿಗಳು ಕರೆಪ್ಪ ಬಿರಾದಾರ ಈನಿಗೆ ಹರಿತವಾದ ಆಯುಧದಿಂದ ಹತ್ಯೆ ಮಾಡಿ, ಪರಾರಿಯಾಗಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.