Sunday, December 4, 2022

Latest Posts

ರೋಚಕ ಸೆಮಿಫೈನಲ್ ನಲ್ಲಿ ನೆಟ್ಟಿಗರನ್ನು ಸೆಳೆದ ಪಾಕ್ ಕನ್ಯೆಯಿಂದ ಬಂತು ಭಾರತೀಯ ಅಭಿಮಾನಿಗಳಿಗೆ ಸಂದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್‌ ನಡುವಣ ಸೆಮಿಫೈನಲ್ ಪಂದ್ಯದ ರೋಚಕ ಕ್ಷಣ ಒಂದೆಡೆಯಾದರೆ ಇತ್ತ ಸ್ಟೇಡಿಯಂ ನಲ್ಲಿ ಅಭಿಮಾನಿಗಳ ಮದ್ಯೆ ಎಲ್ಲರ ಗಮಸೆಳೆದಿದ್ದಾಳೆ ಆ ಪಾಕ್ ಯುವತಿ.

ಹೌದು, ಬುಧವಾರ ನಡೆದ ಸೆಮಿಫೈನಲ್‌ ‍ಪಂದ್ಯದಲ್ಲಿ, ವೀಕ್ಷಕರ ಗ್ಯಾಲರಿಯಲ್ಲಿದ್ದ ಪಾಕಿಸ್ತಾನದ ಅಭಿಮಾನಿ ನಟಾಶಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಹರಿದಾಡಿತ್ತು.

ಎದೆಗೆ ಪಾಕಿಸ್ತಾನದ ಬಾವುಟವನ್ನು ಅಂಟಿಸಿಕೊಂಡು, ಪಾಕಿಸ್ತಾನ ತಂಡಕ್ಕೆ ಚಿಯರ್‌ ಅಪ್‌ ಮಾಡುವ ಅವರ ಹಲವು ಫೋಟೋಗಳು ನೆಟ್ಟಿಗರ ಮಾತಿನ ಹಾಟ್ ವಿಷಯವಾಗಿತ್ತು. ಅದರಲ್ಲೂ ಭಾರತೀಯರೇ ಹೆಚ್ಚಾಗಿ ಇವರ ಫೋಟೋವನ್ನು ಶೇರ್‌ ಮಾಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ನೆಟ್ಟಿಗರು , ‘ಕ್ಯಾಮೆರಾಮೆನ್‌ ಯಾವತ್ತೂ ನಮ್ಮನ್ನು ನಿರಾಸೆಗೊಳಿಸುವುದಿಲ್ಲ’ ಎಂದು ನಟಶಾ ಅವರ ಫೋಟೋ ಹಂಚಿಕೊಂಡಿದ್ದರು. ಅದೇ ರೀತಿ ವಿವಿಧ ಟ್ರೋಲ್‌ ಪೇಜ್‌ಗಳಿಗೂ ನಟಶಾ ಅವರು ವಸ್ತುವಾಗಿದ್ದರು.

ಇತ್ತ ತಮ್ಮ ಪೋಟೋ ವೈರಲ್ ಮಾಡಿದ್ದಕ್ಕೆ ಪಾಕ್ ಅಭಿಮಾನಿ ನಟಾಶಾ, ಭಾರತೀಯ ಅಭಿಮಾನಿಗಳಿಗೆ ಧನ್ಯವಾದ ಸಮರ್ಪಿಸಿದ್ದು, ‘ಭಾರತೀಯ ಅಭಿಮಾನಿಗಳಿಗೆ ‌ಧನ್ಯವಾದಗಳು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಭೇಟಿಯಾಗೋಣ’ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!