spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದಸರಾದ ಜಂಬೂಸವಾರಿಯಲ್ಲಿ ಜಾನಪದ ಕಲಾತಂಡಗಳ ಕಲರವ

- Advertisement -Nitte

ಹೊಸ ದಿಗಂತ ವರದಿ,ಮೈಸೂರು:

ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಕೊನೆದಿನವಾದ ವಿಜಯದಶಮಿಯಂದು ನಡೆದ ಜಂಬೂಸವಾರಿ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳ ಕಲರವ ಕಣ್ಮನ ಸೆಳೆಯಿತು.
ಜಂಬೂಸವಾರಿಗೆ ಮೆರವಣಿಗೆಗೆ ಮೆರುಗು ನೀಡುವುದೇ ಜಾನಪದ ಕಲಾತಂಡಗಳ ಪ್ರದರ್ಶನ. ಇದು ಇಲ್ಲದಿದ್ದರೆ ಮೆರವಣಿಗೆ ಪರಿಪೂರ್ಣ ಎನಿಸುವುದಿಲ್ಲ. ಹಾಗಾಗಿ ಕೊರೋನಾ ಕಾರಣದಿಂದಾಗಿ ಅರಮನೆ ಆವರಣದೊಳಗೆ ಸೀಮಿತವಾಗಿ ಜಂಬೂಸವಾರಿ ಮೆರವಣಿಗೆಯನ್ನು ನಡೆಸಿದರೂ, ಜಾನಪದ ಕಲಾತಂಡಗಳ ಪ್ರದರ್ಶನಕ್ಕೆ ಅವಕಾಶವನ್ನು ನೀಡಲಾಗಿತ್ತು.
ಈ ಬಾರಿ ಜಂಬೂಸವಾರಿಯಲ್ಲಿ 13 ಕಲಾತಂಡಗಳು ಪಾಲ್ಗೊಂಡಿದ್ದವು. ನಾದ ಸ್ವರ ವಿದ್ವಾನ್ ಆರ್.ನಾಗರಾಜ್ ಮತ್ತು ಅವರ ತಂಡ, ಹಂಪಾಪುರ ಮಹದೇವ್ ಹಾಗೂ ಅವರ ತಂಡ ನಾದಸ್ವರ ನುಡಿಸುತ್ತಾ ಸಾಗಿದರು. ಮೈಸೂರಿನ ರತ್ನಮ್ಮ ಮತ್ತು ತಂಡ ಸ್ಯಾಕ್ಸೋಪೋನ್‌ನ್ನು ಸುಶ್ರಾವ್ಯವಾಗಿ ನುಡಿಸುತ್ತಾ ಮುಂದೆ ಹೋದರು. ಅವರ ಹಿಂದೆ ವೀರಗಾಸೆ ಕಲಾವಿದರಾದ ಅಂಬಳೆ ಶಿವಣ್ಣ ಮತ್ತು ತಂಡ, ನೀಲಕಂಠ ಮತ್ತು ತಂಡ, ಆನಂದ್ ಕುಮಾರ್ ಮತ್ತು ತಂಡ, ಹೆಚ್.ಸಿ.ರುದ್ರೇಶ್ ಮತ್ತ ತಂಡ ವೀರಭದ್ರ ವೇಷಧಾರಿಗಳಾಗಿದ್ದ ವೀರಭದ್ರನ ಕುಣಿತ ಪ್ರದರ್ಶನ ನೀಡುತ್ತಾ ಸಾಗಿದರು. ನಂತರ ಮಲೆ ಮಹದೇಶ್ವರ ಭಕ್ತರಾದ ಕಂಸಾಳೆ ಕಲಾವಿದರುಗಳಾದ ಕೆಂಪಿಸಿದ್ಧನಹುAಡಿ ಮಹದೇವು ಮತ್ತು ತಂಡ, ಚಿಕ್ಕ ಮರಿಯಪ್ಪ ಮತ್ತು ತಂಡ, ಕೃಷ್ಣ ಜನಮನ ಮತ್ತು ತಂಡ ಕಂಸಾಳೆ ಬೀಸುತ್ತಾ, ವಿವಿಧ ನೃತ್ತಗಳನ್ನು ಮಾಡುತ್ತಾ ತಮ್ಮ ಪ್ರದರ್ಶನವನ್ನು ನೀಡಿದರು. ನಂತರ ಡೊಳ್ಳುಕುಣಿತ ಕಲಾವಿದರಾದ ಕುಮಾರಿ ರಮ್ಯ ಮತ್ತು ತಂಡ, ಕಿರಣ್ ಮತ್ತು ತಂಡ, ಕುಮಾರ್ ಮತ್ತು ತಂಡ, ಸ್ವಾಮಿ ನಾಯಕ ಮತ್ತು ತಂಡ ಡೊಳ್ಳು ಬಾರಿಸಿ, ಕುಣಿಯುತ್ತಾ ಸಾಗಿದರು.
ಕಲಾವಿದರಾದ ಅಮೃತ ಮತ್ತು ತಂಡ ನಗಾರಿಯನ್ನು ಬಾರಿಸಿದರೆ, ಟಿ.ನರಸೀಪುರದ ಕಲಾವಿದರಾದ ವೈ.ವಿ.ಪ್ರಕಾಶ್ ಮತ್ತು ತಂಡ ಪೂಜಾ ಕುಣಿತ ಮಾಡಿ ಗಮನ ಸೆಳೆಯಿತು.
ಕೊಂಬು ಕಹಳೆ ಕಲಾವಿದರಾದ ನಳಿನ ಹೆಚ್.ಕೆ. ಮತ್ತು ತಂಡ ಕೊಂಬು, ಕಹಳೆಗಳಿಂದ ನಾದ ಹೊರಹೊಮ್ಮಿಸುತ್ತಾ, ಈ ಹಿಂದೆ ನಡೆಯುತ್ತಿದ್ದ ಹಬ್ಬ, ಹರಿದಿನಗಳು, ಜಾತ್ರೆ, ಯುದ್ಧದ ವೇಳೆಯಲ್ಲಿ ಕೊಂಬ ಕಹಳೆಯ ಮಹತ್ವವಿತ್ತು ಎಂಬುದನ್ನು ತೋರಿಸಿದರು. ಮೈಸೂರಿನ ಮಹಾಲಿಂಗೇಶ್ವರ ಯಕ್ಷಗಾನ ಕಲಾವಿದರು ಪ್ರದರ್ಶನ ನೀಡುವ ಮೂಲಕ ಕಣ್ಮನ ಸೆಳೆದರು. ಚಂಡೆವಾದನ ಕಲಾವಿದರಾದ ವಾಸುದೇವ ಬನ್ನಂಜೆ ತಂಡ ಚಂಡೆ ಪ್ರದರ್ಶನ ನೀಡಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss