ಮಗನ ಸಾವಿನ ಸುದ್ಧಿ ತಿಳಿದು ಕುಸಿದು ಬಿದ್ದು ಮೃತಪಟ್ಟ ತಾಯಿ

ಹೊಸದಿಗಂತ ವರದಿ,ಮಂಡ್ಯ:

ಮಗನ ಸಾವಿನ ಸುದ್ಧಿ ತಿಳಿದು ಶವ ನೋಡಲು ಓಡಿ ಬಂದ ತಾಯಿಯೂ ಸಹ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಾಗಮಂಗಲ ತಾಲೂಕು ಗಿಡದ ಹೊಸಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕುಶಾಲ್ (45) ಹಾಗೂ ಈತನ ತಾಯಿ ಲಕ್ಷ್ಮಮ್ಮ (69) ಎಂಬುವರೇ ಮೃತಪಟ್ಟ ತಾಯಿ-ಮಗ.
ಘಟನೆ ವಿವರ :
ಮನೆಯಲ್ಲಿ ಟಿ.ವಿ. ನೋಡುತ್ತಿದ್ದ ಮಗ ಕುಶಾಲ್ ರಕ್ತದೊತ್ತಡ ಕಡಿಮೆಯಾಗಿ (ಲೋ ಬಿ.ಪಿ) ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆದಲ್ಲಿ ಮೃತಪಟ್ಟಿದ್ದಾರೆ.
ಅನಾರೋಗ್ಯಕ್ಕೊಳಗಾಗಿದ್ದ ತಾಯಿಗೆ ಮಗನ ಸಾವಿನ ಸುದ್ಧಿ ಹೇಳುವುದೋ ಬೇಡವೋ ಎಂಬ ಗೊಂದಲದ ನಡುವೆ ಆಕೆಗೆ ಯಾರೋ ಮಗನ ಸಾವಿನ ಸುದ್ದಿ ತಿಳಿಸಿದ್ದಾರೆ. ಮಗನ ಶವವನ್ನು ತಂದು ಮಲಗಿಸುತ್ತಿದ್ದಂತೆ ನೋಡಲು ಬಂದ ತಾಯಿ ಲಕ್ಷ್ಮಮ್ಮ ಮಗನ ಶವವನ್ನು ಕಂಡು ಕೂಗುತ್ತಲೇ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಯಿ-ಮಗನ ಶವಗಳನ್ನು ಗ್ರಾಮದಲ್ಲಿ ಒಟ್ಟಿಗೇ ಅಂತ್ಯಸಂಸ್ಕಾರ ನಡೆಸಲಾಯಿತು. ತಾಯಿ-ಮಗನನ್ನು ಕಳೆದುಕೊಂಡ ಕುಟುಂಬ ಅನಾಥವಾಗಿದ್ದುಘಿ, ಕುಟುಂಬ ಸದಸ್ಯರ ಆಕ್ರಂಧನ ಮುಗಿಲು ಮುಟ್ಟಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!