ಮುಸ್ಲಿಮರ ಮನೆಯಲ್ಲಿ 2-3 ಪತ್ನಿಯರು ಇರುತ್ತಾರೆ, ಯಾರು ಯಜಮಾನಿ ಆಗುತ್ತಾರೆ?: ಪ್ರತಾಪ್ ಸಿಂಹ ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಕಾಂಗ್ರೆಸ್ ಸರಕಾರ ಜನರಿಗೆ ಗ್ಯಾರಂಟಿ ಘೋಷಣೆ ಮಾಡಿದ್ದು , ಅದ್ರ ಪರ ವಿರೋಧಗಳ ಚರ್ಚೆ ಶುರುವಾಗಿದೆ. ಇದೀಗ ಮುಸ್ಲಿಮರ ಮನೆಯಲ್ಲಿ ಇಬ್ಬರು-ಮೂವರು ಹೆಂಡತಿ ಇರುತ್ತಾರೆ, ಅವರಲ್ಲಿ ಮನೆ ಯಜಮಾನಿ ಯಾರು ಎಂದು ನಿರ್ಧರಿಸೋಕೆ ಆಗುತ್ತಾ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಪ್ರತಾಪ್ ಸಿಂಹ ಗೃಹಲಕ್ಷ್ಮಿ ಯೋಜನೆ ಕುರಿತು ಟೀಕಿಸಿದ್ದಾರೆ.

ಒಂದು ಕಡೆ ಹಿಂದುಗಳ ಮನೆಯಲ್ಲಿ 2000 ರೂಗಾಗಿ ಮನೆಯ ಯಜಮಾನಿ ಯಾರು ಎಂಬುದಕ್ಕೆ ಕಿತ್ತಾಟ ನಡೆಯುತ್ತಿದೆ. ಇನ್ನೊಂದು ಕಡೆ ಮುಸ್ಲಿಮರ ಮನೆಯಲ್ಲಿ ಇಬ್ಬರು-ಮೂವರು ಹೆಂಡತಿ ಇರುತ್ತಾರೆ, ಅವರಲ್ಲಿ ಮನೆ ಯಜಮಾನಿ ಯಾರು ಎಂದು ನಿರ್ಧರಿಸೋಕೆ ಆಗುತ್ತಾ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ ನಿಂದ ಮುಸ್ಲಿಂ ಕುಟುಂಬ ಒಡೆಯುವ ಕೆಲಸ ಆಗುತ್ತಿದೆ, ಸರ್ಕಾರ ಮುಸ್ಲಿಮರ ಮನೆಯಲ್ಲಿ ಬೆಂಕಿ ಹಚ್ಚು ಕೆಲಸ ಮಾಡುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ (prathap simha)ಕಿಡಿಕಾರಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ತಲೆ ಮೇಲೆ ಟೋಪಿ ಹಾಕಿಕೊಂಡವರನ್ನು ಕಾಂಗ್ರೆಸ್​​ನವರು ಎನ್ನುತ್ತಿದ್ದರು. ಈಗ ಕಾಂಗ್ರೆಸ್‌ನವರನ್ನು ಜನರಿಗೆ ಟೋಪಿ ಹಾಕುವವರು ಎನ್ನುತ್ತಾರೆ. ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತ ಎಂದು ಹೇಳಿದ್ದರು. ಈಗ ಸರಾಸರಿ ತೆಗೆದು ಉಚಿತ ಕೊಡುತ್ತೇವೆ ಅಂತಾ ಹೇಳಿದ್ದಾರೆ. ಇದು ಮೋಸ ಅಲ್ವಾ? ಯಾವುದೇ ಷರತ್ತು ಇಲ್ಲದೆ ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡಲೇಬೇಕು ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!