ನಸ್ ಬಂಧಿಗೊಂದು ಹೊಸ ಆಯಾಮ, ಬೇಕಾದಾಗ ಮತ್ತೆ ತೆರೆಯಬಹುದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಂತಾನಹರಣವು ಪುರುಷರಿಗೆ ಗರ್ಭನಿರೋಧಕದ ಅತ್ಯಂತ ವಿಶ್ವಾಸಾರ್ಹ ವಿಧಾನವೆಂದು ಸಾಬೀತಾಗಿದೆ. ಇದು ಆ ಕ್ಷಣದ ಉತ್ಸುಕತೆಯಲ್ಲಿ ವಿಫಲಗೊಳ್ಳುವುದಿಲ್ಲವೆಂದೇ ಬಹುಪಾಲು ಜನರು ಈ ವಿಧಾನದ ಮೊರೆ ಹೋಗುತ್ತಾರೆ. ಈ ವಿಧಾನದಲ್ಲಿ ವೃಷಣಗಳಿಂದ ವೀರ್ಯದ ಹರಿವನ್ನು ನಿಲ್ಲಿಸಲಾಗುತ್ತದೆ. ವಾಸ್ ಡಿಫರೆನ್ಸ್ ಎಂದು ಕರೆಯಲ್ಪಡುವ ಕೊಳವೆಗಳನ್ನು ಕತ್ತರಿಸಿ ಅವುಗಳನ್ನು ಮುಚ್ಚುವ ಅಥವಾ ಗಂಟು ಹಾಕುವ ಮೂಲಕ ವೀರ್ಯವು ಹೊರ ಬರದಂತೆ ತಡೆಯಲಾಗುತ್ತದೆ. ಆದರೆ ಇದನ್ನು ಬೇಕೆಂದಾಗ ಬದಲಾಯಿಸಲು ಸಾಧ್ಯವಿಲ್ಲ. ಮತ್ತೆ ಬೇಕೆಂದರೆ ಪುನಃ ಸಂಪರ್ಕಿಸುವುದು ಕಷ್ಟಸಾಧ್ಯ.

ಹೀಗಾಗಿಯೇ ಸಂಶೋಧಕರು ಬೇಕೆಂದಾಗ ಬದಲಾವಣೆ ಮಾಡಿಕೊಳ್ಳಬಹುದಾದ ಹೊಸ ವಿಧಾನವನ್ನು ಸಂಶೋಧನೆ ಮಾಡಿದ್ದಾರೆ. ತೆಗೆದುಹಾಕಲು ಅನುಕೂಲವಾಗುವಂತಹ ಕೆಲವು ಸಂಯುಕ್ತಗಳನ್ನು ಉಪಯೋಗಿಸಿಕೊಂಡು ವೀರ್ಯ ನಿರೋಧಕ ತಡೆಗೋಡೆಗಳನ್ನು ನಿರ್ಮಿಸುವಂತಹ ವಿಧಾನವನ್ನು ಸಂಶೋಧಿಸಲಾಗಿದೆ. ಕೇವಲ ನಾಲ್ಕು ಚುಚ್ಚು ಮದ್ದುಗಳನ್ನು ಬಳಸಿ ಈ ವೀರ್ಯ ನಿರೋಧಕ ತಡೆಗೋಡೆಯನ್ನು ನಿರ್ಮಿಸಬಹುದಾಗಿದ್ದು ನಂತರ ಬೇಕೆಂದಾಗ ಇನ್ಫ್ರಾರೆಡ್‌ ಕಿರಣಗಳನ್ನು ಬಳಸಿ ಇವುಗಳನ್ನು ಸ್ಫೋಟಿಸಲಾಗುತ್ತದೆ.

ಆದರೆ ಪದೇ ಪದೇ ಚುಚ್ಚು ಮದ್ದುಗಳನ್ನು ಬಳಸುವುದರಿಂದ ಪುರುಷರ ಇಚ್ಛೆಯ ಮೇಲೆ ಪರಿಣಾಮ ಬೀರಬಹುದು ಎಂದು ಚೀನಾದ ಹಾರ್ಬಿನ್ ವೈದ್ಯಕೀಯ ವಿಶ್ವವಿದ್ಯಾಲಯದ ಮೂತ್ರಶಾಸ್ತ್ರಜ್ಞ ವಾನ್ಹೈ ಕ್ಸು ಮತ್ತು ಸಹೋದ್ಯೋಗಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೇವಲ ಒಂದು ಚುಚ್ಚುಮದ್ದಿನ ಮೂಲಕ ಇರಿಸಬಹುದಾದ ಮತ್ತು ಅಲ್ಟ್ರಾ ಸೌಂಡ್‌ ಬಳಸಿ ಒಡೆದು ಹಾಕಬಹುದಾದ ತಡೆಗೋಡೆಯೊಂದನ್ನು ಸಂಶೋಧಿಸಿದ್ದಾರೆ.

ಸಂತಾನಹರಣ ಚಿಕಿತ್ಸೆಗೆ ಒಳಪಡಲು ಹಿಂಜರಿಯುವ ಗಂಡಸರು ಟೆನ್ಶನ್‌ ಫ್ರೀ ಯಾಗಿ ಈ ವಿಧಾನವನ್ನು ಅನುಸರಿಸಬಹುದಾಗಿದ್ದು ನಸ್‌ ಬಂಧಿಗೊಂದು ಹೊಸ ಆಯಾಮ ಸಿಕ್ಕಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!