CYBER CRIME | ಫೇಸ್‌ಬುಕ್ ಹ್ಯಾಕಿಂಗ್‌ಗೆ ಹೊಸ ಟೆಕ್ನಿಕ್, ಈ ಮೆಸೇಜ್ ಓಪನ್ ಮಾಡಿದ್ರೆ ಖಾತೆ ಹ್ಯಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫೇಸ್‌ಬುಕ್ ಅಕೌಂಟ್ ಹ್ಯಾಕ್ ಆಗೋದು ಹೊಸತೇನಲ್ಲ, ಇದೀಗ ಹೊಸ ಬ್ಯಾಚ್ ಸೈಬರ್ ಕಳ್ಳರು ವಿನೂತನ ರೀತಿಯಲ್ಲಿ ನಿಮ್ಮ ಅಕೌಂಟ್‌ಗೆ ಕನ್ನ ಹಾಕೋದಕ್ಕೆ ಆರಂಭಿಸಿದ್ದಾರೆ.

ನಿಮ್ಮ ಖಾತೆಯನ್ನು ಹ್ಯಾಕ್ ಮಾಡಿ ಸಿಕ್ಕಸಿಕ್ಕವರ ಬಳಿ ದುಡ್ಡು ಕೇಳೋದು, ಮೋಸ ಮಾಡೋದಕ್ಕೆ ನಿಮ್ಮ ವೈಯಕ್ತಿಕ ಮಾಹಿತಿ ಹಾಗೂ ಫೋಟೊಗಳನ್ನು ಬಳಸಿಕೊಳ್ತಾರೆ.

ಫೇಸ್‌ಬುಕ್ ಖಾತೆಯ ಮೆಸೇಜ್ ಇನ್‌ಬಾಕ್ಸ್‌ನಲ್ಲಿ ಒಂದು ಮೆಸೇಜ್ ಬರುತ್ತದೆ. ನಿಮ್ಮ ಆಪ್ತರು, ಪ್ರೀತಿಪಾತ್ರರು ನಿಧನರಾಗಿದ್ದಾರೆ, ಯಾರೆಂದು ತಿಳಿಯಿರಿ ಎನ್ನುವಂಥ ಮೆಸೇಜ್ ಇದಾಗಿರುತ್ತದೆ. ಈ ಲಿಂಕ್ ಒತ್ತಿ ನಿಮ್ಮ ಲಾಗಿನ್ ಹಾಕಿದರೆ ಅಲ್ಲಿ ನಿಮ್ಮ ಫೇಸ್‌ಬುಕ್ ಸ್ನೇಹಿತರಲ್ಲಿ ಯಾರದ್ದೋ ಫ್ರೆಂಡ್ ಒಬ್ಬರ ಫೋಟೊ ಹಾಕಿ ಸತ್ತು ಹೋಗಿದ್ದಾರೆ ಎಂದು ತೋರಿಸುತ್ತದೆ. ಅಲ್ಲಿಗೆ ಕಥೆ ಮುಗಿಯುತ್ತದೆ. ನಿಮ್ಮ ಖಾತೆಯ ಜುಟ್ಟು ಅವರ ಕೈಗೆ ಸಿಗುತ್ತದೆ.

ತಪ್ಪಿಸಿಕೊಳ್ಳೋದು ಹೀಗೆ..

  • ಯಾವ್ಯಾವುದೋ ಅನಾವಶ್ಯಕ ಲಿಂಕ್‌ಗಳನ್ನು ಓಪನ್ ಮಾಡಬೇಡಿ
  • ಫೇಸ್‌ಬುಕ್ ಸೆಟ್ಟಿಂಗ್ಸ್‌ನಲ್ಲಿ ಸೆಕ್ಯುರಿಟಿ ಗಟ್ಟಿ ಮಾಡಿಕೊಳ್ಳಿ
  • ಪರಿಚಿತರಂತೆಯೇ ಮೆಸೇಜ್ ಬರಬಹುದು, ಅವರಿಗೆ ಕರೆ ಅಥವಾ ವಾಟ್ಸಾಪ್ ಮಾಡಿ ಈ ವ್ಯಕ್ತಿ ಅವರೇನಾ ನೋಡಿ.
  • ನಿಮ್ಮ ಮೊಬೈಲ್‌ಗೆ ಸಾಕಷ್ಟು ಉಪಯೋಗಕ್ಕೆ ಬಾರದ ಇ-ಮೇಲ್ ಹಾಗೂ ಲಿಂಕ್ ಬರಬಹುದು ಅವುಗಳನ್ನು ಇಗ್ನೋರ್ ಮಾಡಿ
  • ಖಾಸಗಿ ಫೋಟೊಗಳು ಹಾಗೂ ಖಾಸಗಿ ಮಾಹಿತಿ ಇರುವ ಫೋಟೊ ಫೇಸ್‌ಬುಕ್‌ನಲ್ಲಿದ್ದರೆ ತಕ್ಷಣ ತೆಗೆದುಬಿಡಿ
  • ಸುಲಭವಾದ ಅಲ್ಲ, ಕಠಿಣವಾದ, ಯಾರೂ ಊಹಿಸಲಾರದ ಪಾಸ್‌ವರ್ಡ್ ನೀಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!