ಡೆಂಗ್ಯೂಗೆ ಬ್ರೇಕ್ ಹಾಕಲು ಬರುತ್ತಿದೆ ಹೊಸ ಅಸ್ತ್ರ: 2027ರಲ್ಲಿ ಭಾರತಕ್ಕೆ ‘ಕ್ಯೂಡೆಂಗಾ’ ಲಸಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಳೆಗಾಲ ಆರಂಭವಾದರೆ ಸಾಕು ಶೀತ, ಜ್ವರ ಹಾಗೂ ಡೆಂಗ್ಯೂನಂತಹ ಸಾಂಕ್ರಾಮಿಕ ರೋಗಗಳು ಸಾಲುಗಟ್ಟಿ ನಿಂತು ಬಿಡುತ್ತವೆ. ಈ ರೋಗಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಮತ್ತು ಸೊಳ್ಳೆ ನಿಯಂತ್ರಣ ಕ್ರಮಗಳು ಪ್ರಮುಖವಾಗಿರುವ ನಡುವೆಯೇ, ಡೆಂಗ್ಯೂ ವಿರುದ್ಧ ಹೋರಾಡಲು ಭಾರತಕ್ಕೆ ಶೀಘ್ರದಲ್ಲೇ ಮತ್ತೊಂದು ಆಯುಧ ಸೇರ್ಪಡೆಯಾಗುವ ನಿರೀಕ್ಷೆಯಿದೆ. ಜಪಾನ್‌ನ ಟಕೇಡಾ ಫಾರ್ಮಾಸ್ಯುಟಿಕಲ್ ಅಭಿವೃದ್ಧಿಪಡಿಸಿರುವ ‘ಕ್ಯೂಡೆಂಗಾ’ ಲಸಿಕೆ 2027ರ ಮೊದಲಾರ್ಧದಲ್ಲಿ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ನಾಲ್ಕು ವೈರಸ್‌ಗಳ ವಿರುದ್ಧ ರಕ್ಷಣೆ ಕ್ಯೂಡೆಂಗಾ ಲಸಿಕೆಯನ್ನು … Continue reading ಡೆಂಗ್ಯೂಗೆ ಬ್ರೇಕ್ ಹಾಕಲು ಬರುತ್ತಿದೆ ಹೊಸ ಅಸ್ತ್ರ: 2027ರಲ್ಲಿ ಭಾರತಕ್ಕೆ ‘ಕ್ಯೂಡೆಂಗಾ’ ಲಸಿಕೆ