ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರ್ಮಾಣಹಂತದ ಸುರಂಗ ಮಾರ್ಗ ಕುಸಿದಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.ಇಂದು ಬೆಳಗ್ಗೆ 5.30ರ ಸುಮಾರಿಗೆ ಉತ್ತರಕಾಶಿಯ ಸಿಲ್ಕ್ಯಾರಾದಿಂದ ದಾಂಡಲ್‌ಗಾಂವ್‌ವರೆಗೆ ನಿರ್ಮಾಣ ಹಂತದಲ್ಲಿದ್ದ ಸುರಂಗದ ಒಂದು ಭಾಗ ಕುಸಿದಿದ್ದು, 36ಕಾರ್ಮಿಕರು ಅವಸೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಉತ್ತರಕಾಶಿ ಜಿಲ್ಲೆಯ ಡಿಎಂ ಮತ್ತು ಎಸ್ಪಿ ಸ್ಥಳದಲ್ಲಿದ್ದು, ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.
https://twitter.com/i/status/1723583373359346089
ಉತ್ತರಕಾಶಿ ಎಸ್‌ಪಿ ಅರ್ಪಣ್ ಯದುವಂಶಿ ಮಾತನಾಡಿ, ‘ಸಿಲ್ಕ್ಯಾರಾ ಸುರಂಗದ ಒಂದು ಭಾಗವು ಪ್ರಾರಂಭದ ಸ್ಥಳದಿಂದ ಸುಮಾರು 200 ಮೀಟರ್‌ವರೆಗೆ ಕುಸಿದಿದ್ದು, ಹೆಚ್‌ಐಡಿಸಿಎಲ್‌ನ ಅಧಿಕಾರಿಗಳು ಹೇಳುವಂತೆ ಸುಮಾರು 36 ಜನರು ಸುರಂಗದಲ್ಲಿ ಸಿಲುಕಿರುವ ಸಾಧ್ಯತೆಯಿದೆ. ಎಲ್ಲರನ್ನು ಸುರಕ್ಷಿತವಾಗಿ ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ. ಪೊಲೀಸ್ ಪಡೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡವು ಸ್ಥಳದಲ್ಲಿದೆ. ಇದುವರೆಗೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನಾವು ಶೀಘ್ರದಲ್ಲೇ ಎಲ್ಲ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸುತ್ತೇವೆ.” ಎಂದರು.