spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, December 8, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಈ ರೀತಿ ಮನೆ ಇನ್ನೆಲ್ಲೂ ಇಲ್ಲ, ಒಂದು ಬಾರಿ ಹೋಗಿಬಂದ್ರೆ ಇನ್ನೆಂದೂ ಮರೆಯೋದಿಲ್ಲ!

- Advertisement -Nitte

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:

“ಏಳೋದಕ್ಕೆ ಅದೇ ಅಲಾರಾಮ್‌, ಅದೇ ಇಡ್ಲಿ-ಸಾಂಬಾರ್‌, ಟ್ರಾಫಿಕ್‌, ಜಾಬ್‌ ಎಲ್ಲ ಅದೇ ಅದೇ.. ಬದುಕಲ್ಲಿ ಏನು ಹೊಸತನವೇ ಇಲ್ಲ. ಸಾಕಾಗಿದೆ ಈ ಸಿಟಿ ಜೀವನ. ಎಲ್ಲಿಗಾದ್ರೂ ನಾಲ್ಕ ದಿನ ಹಾಯಾಗಿ ಇದ್ದು ಬರುವ ಜಾಗಕ್ಕೆ ಹೋಗಿ ಬರಬೇಕು” ಎನ್ನುವವರಿಗೆ ಇಲ್ಲೊಂದು ಸೂಪರ್‌ ಪ್ಲೇಸ್‌ ಇದೆ ನೋಡಿ..

ಈ ಜಾಗ ಇರೋದು ಇಂಡೋನೇಷ್ಯಾದಲ್ಲಿ. ಬೀಚ್‌ಗಳಿಂದ ಸಾಕಷ್ಟು ಹೆಸರುವಾಸಿಯಾಗಿರುವ ಇಂಡೋನೇಷ್ಯಾ ಹೊಸ ರೀತಿಯ ಪ್ರಯೋಗವೊಂದಕ್ಕೆ ಮುಂದಾಗಿದೆ. ಅದೇನೆಂದರೆ ಇಲ್ಲಿನ ದಟ್ಟ ಕಾಡಿನಲ್ಲಿ ಪರಿಸರಸ್ನೇಹಿ ಮನೆಗಳನ್ನು ತಯಾರಿಸಿದ್ದಾರೆ.

ಈ ಮನೆಗಳು ಸಂಪೂರ್ಣವಾಗಿ ಇಲ್ಲಿನ ಸ್ಥಳೀಯ ತಳಿಯಾದ ಆಸ್ಪರ್‌ ಬಿದಿರಿನಿಂದ ಸಿದ್ದವಾಗಿದೆ. ಬಿದರನ್ನು ಬಿಟ್ಟು ಬೇರೆ ಯಾವುದೇ ವಸ್ತುವನ್ನೂ ಕೂಡ ಮನೆ ನಿರ್ಮಾಣಕ್ಕೆ ಬಳಸಿಕೊಳ್ಳಲಿಲ್ಲ. ಈ ಮನೆಗಳಿಗೆ “ಔರಾ” ಎಂದು ಕರೆಯಲಾಗುತ್ತದೆ. ಒಮ್ಮೆ ಚಿತ್ರದಲ್ಲಿ ನೋಡಿದರೇನೆ ವ್ಹಾವ್‌ ಅನಿಸುತ್ತದೆ. ಇನ್ನು ಅಲ್ಲಿ ನಾಲ್ಕು ದಿನ ಉಳಿದು ಬಂದರೆ ಲೈಫ್‌ ಟೈಮ್‌ ಮೆಮೋರಿ.

ಔರಾ ಹೌಸ್ ಹೇಗಿದೆ?

ಈ ಔರಾ ಮನೆಗಳಿರುವುದು ಉಷ್ಣವಲಯದ ದಟ್ಟ ಕಾಡುಗಳ ಮಧ್ಯೆ. ಇದು ಮೂರು ಅಂತಸ್ಥಿನ ಮನೆ. ಇಲ್ಲಿನ ಮಂಚ, ಕಿಟಕಿ, ಬಾಗಿಲು, ಕುರ್ಚಿ, ಮೆಟ್ಟಿಲು, ಟೀ ಕುಡಿಯುವ ಕಪ್‌,  ಇಲ್ಲಿರುವ ಪ್ರತಿಯೊಂದು ವಸ್ತು ಕೂಡ ಬಿದಿರಿನಿಂದಲೇ ತಯಾರಾಗಿದೆ. ಮನೆ ಎದುರು ಈಜು ಕೊಳ ಕೂಡ ಇದೆ.  ಗಾರ್ಜ್ ನದಿಗೆ ಸಮೀಪದಲ್ಲಿಯೇ ಈ  ಔರಾ ಹೌಸ್‌ಗಳಿರುವುದರಿಂದ ಇಲ್ಲಿನ ಮನೆಗಳು ಬಹಳ ತಣ್ಣಗಿರುತ್ತವೆ.

ಹೆಚ್ಚಾಗಿ ಇಲ್ಲಿಗೆ ನ್ಯೂ ಕಪಲ್ಸ್‌ ಹನಿಮೂನ್‌ಗೆ ಬರುತ್ತಾರೆ. ಹಾಗೆಯೇ ಇಲ್ಲಿ ಒಳ್ಳೊಳ್ಳೆ ಪ್ಲೇಸ್‌ ಇರೋದ್ರಿಂದ ಫೋಟೋ ಶೂಟ್ ಗೆ ಕೂಡ ಬರುತ್ತಾರೆ.

ಆದರೆ ಔರಾ ಮನೆಯಲ್ಲಿ ಒಂದು ಹೊತ್ತು ಇರಬೇಕೆಂದ್ರೂ ಜೇಬು ಗಟ್ಟಿಯಾಗಿರಬೇಕು. ಏಕೆಂದ್ರೆ ಈ ಮನೆಯ ಒಂದು ದಿನದ ಬಾಡಿಗೆ 18,222.93 ರೂಪಾಯಿ. ಚೆನ್ನಾಗಿ ದುಡಿದು ಜೇಬು ಗಟ್ಟಿ ಮಾಡಿಕೊಂಡು ಒಂದು ಹೊತ್ತಿಗಾದರೂ ಈ ಮನೆ ವಾಸ ಮಾಡಿ. ಜೀವನದ ಕೊನೆವರೆಗೂ ನೆನಪು ಅಚ್ಚಾಗಿರುತ್ತದೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss