VIRAL VIDEO| ಥಿಯೇಟರ್‌ ಬಳಿ ʻಪಠಾಣ್‌ʼ ಪೋಸ್ಟರ್‌ ಹರಿದು, ಬೆಂಕಿ ಹಚ್ಚಿ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಳಗಾದರೆ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮೊದಲೇ ಬಿಹಾರದ ಭಾಗಲ್‌ಪುರದಲ್ಲಿ ಪಠಾಣ್ ಚಿತ್ರದ ಪೋಸ್ಟರ್‌ಗಳನ್ನು ಹರಿದು ಬೆಂಕಿ ಹಚ್ಚಲಾಗಿದೆ.  ಭಾಗಲ್ಪುರದ ದೀಪಪ್ರಭ ಥಿಯೇಟರ್‌ನಲ್ಲಿ ಶಾರುಖ್ ಖಾನ್ ಚಿತ್ರ ಪಠಾನ್ ಸಿನಿಮಾ ಪ್ರದರ್ಶಿಸಲು ನಿರ್ಧರಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸಿನಿಮಾ ಚಲೇಗಾ ಹಾಲ್ ಜಲೇಗಾ ಎಂದು ಘೋಷಣೆ ಕೂಗಿ ಎಬಿವಿಪಿ ಹಾಗೂ ಬಜರಂಗದಳ ಕಾರ್ಯಕರ್ತರು ಚಿತ್ರಮಂದಿರದ ಬಳಿಯಿದ್ದ ಪೋಸ್ಟರ್ ಗಳನ್ನು ಹರಿದು ಸುಟ್ಟು ಹಾಕಿದ್ದಾರೆ. ಭಾಗಲ್ಪುರ ಮತ್ತು ಇಡೀ ಭಾರತವು ಸನಾತನ ಸಂಸ್ಕೃತಿಯನ್ನು ವಿರೋಧಿಸುವ ಯಾವುದೇ ಅಂಶಗಳನ್ನು ಅನುಮತಿಸುವುದಿಲ್ಲ ಎಂದು ಸಂಘಟನೆಯ ಸದಸ್ಯರು ಘೋಷಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್‌ ಆಗಿದೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!