ಹೊಸದಿಗಂತ ವರದಿ, ಬಾಗಲಕೋಟೆ :
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವದ ನಿಮಿತ್ತ ನಗರದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷದಾರಿಗಳ ಪಥ ಸಂಚಲನ ದೇಶಾಭಿಮಾನ ಮೂಡಿಸಿತು.
ಬಾಗಲಕೋಟೆ ಬಿವ್ಹಿವ್ಹಿ ಸಂಘದ ಕಾಲೇಜ್ ಮೈದಾನದಿಂದ ಎರಡು ಮಾರ್ಗದಲ್ಲಿ ಸಂಚರಿಸಿದ ಪಥ ಸಂಚಲನ ಬಸವೇಶ್ವರ ವೃತ್ತದಲ್ಲಿ ಸಮಾಗಮಗೊಂಡಾಗ ನೆರೆದ ಜನರಲ್ಲಿ ಮೈ ರೋಮಾಂಚನಗೊಳಿಸಿತು.
ಜಿಲ್ಲೆಯ ವಿವಿಧ ಭಾಗದಿಂದ ಸಾವಿರಾರು ಜನ ಸೇರಿದ್ದರು ನೆರೆದವರು ಭಾರತ ಮಾತಾಕಿ ಜೈ ಎಂಬ ಘೋಷಣೆ ಮೊಳಗಿದವು