Thursday, July 7, 2022

Latest Posts

ಮಳೆಯಿಂದ ಹಾನಿಗೊಳಗಾದ ಮನೆ: ಕೇಂದ್ರ ಅಧ್ಯಯನ ತಂಡ ಪರಿಶೀಲನೆ

ದಿಗಂತ ವರದಿ ತುಮಕೂರು:

ಗುಬ್ಬಿ ತಾಲೂಕಿನ ಎಂ ಹೆಚ್ ಪಟ್ಟಣದಲ್ಲಿ ಮಳೆಯಿಂದ ಮನೆ ಹಾನಿಗೊಳಗಾದ ವೆಂಕಟಲಕ್ಷ್ಮಮ್ಮ ಅವರ ಮನೆಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಂಡದಲ್ಲಿದ್ದ ರಾಜ್ಯ ನೈಸರ್ಗಿಕ ವಿಕೋಪವೆನ್ನುವುದು ಪರಿಹಾರ ಇಲಾಖೆಯ ಕಾರ್ಯನಿರ್ವಾಹಕ ನಿರ್ಧೇಶಕರಾದ ಆರ್. ಮನೋಜ್ ರಾಜನ್ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿದ್ಯಾಕುಮಾರಿ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಹಾನಿಗೊಳಗಾದ ಮನೆಗೆ ಪರಿಹಾರ ನೀಡಲಾಗಿದೆಯೇ ಎಂದು ಅವರು ಸಿ.ಇ.ಓ.ಅವರನ್ನು ಪ್ರಶ್ನೆ ಮಾಡಿದಾಗ ಅವರು ನೀಡಲಾಗಿದೆ ಎಂದು ಉತ್ತರಿಸಿದರು .ಮನೆಯ ಒಡತಿಯನ್ನು ಪರಿಹಾರ ತಲುಪಿದೆಯೇ ಎಂದು ಪ್ರಶ್ನೆಮಾಡಿದಾಗ ಅವರು ಇಲ್ಲ ಎಂದರು. ಮತ್ತೆ ಸಿಇಓ ಅವರನ್ನು ಪ್ರಶ್ನೆ ಮಾಡಿದಾಗ ಆರ್. ಟಿ.ಜಿ.ಎಸ್ ಮಾಡಲಾಗಿದೆ ಎಂದರು. ಈ ಬಗ್ಗೆ ಹಾನಿ ಗೊಳಗಾದವರ ಗಮನಕ್ಕೆ ತರಲಾಗಿದೆಯೇ ಎಂದಾಗ ಮೂರುದಿನದಲ್ಲಿ ಅವರ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ ಎಂದು ಹೇಳಿದರು.ಆಗ ಕೇಂದ್ರ ತಂಡದ ಅಧಿಕಾರಿ ನಾನು ಕೇಳಿದ್ದು ಅವರ ಗಮನಕ್ಕೆ ಆರ್ ಟಿ ಜಿ ಎಸ್ ಮಾಡಿದ ವಿಷಯವನ್ನು ತಿಳಿಸಲಾಗಿದೆಯೇ ಎಂದು. ಆದರೆ ನೀವು ನನ್ನ ಪ್ರಶ್ನೆಗೆ ಉತ್ತರಿಸದೇ. ಬೇರೇನೋ ಹೇಳುತ್ತಿದ್ದೀರಾ ಆರ್ ಟಿ ಜಿ ಎಸ್ ಮಾಡಿದ ವಿಷಯವನ್ನು ನನಗೇಕೆ ಹೇಳಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss