spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಶ್ವಾನದ ಮುಂಗಾಲು ಹಿಡಿದು ಮಗುವಿನಂತೆ ಮಲಗುವ ಹಕ್ಕಿ: ಅಪರೂಪದ ದೃಶ್ಯ ವೈರಲ್

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಪ್ರೀತಿ, ಸ್ನೇಹ ಎಂಬುದು ಅದ್ಭುತ ಸಂಬಂಧ… ಮನಸ್ಸಿಗೆ ಆನಂದ ನೀಡುವ, ಬದುಕಿಗೊಂದು ಚೈತನ್ಯ ತುಂಬುವ ಅಪೂರ್ವ ಬಾಂಧವ್ಯವಿದು. ಮನುಷ್ಯರಾಗಲಿ ಅಥವಾ ಇನ್ನಾವುದೇ ಜೀವಿಗಳಲ್ಲಾಗಲಿ ಖಂಡಿತಾ ಇವೆರಡನ್ನೂ ಕಾಣಬಹುದಾಗಿದೆ.

ಇಂತಹ ಸ್ನೇಹ, ಪ್ರೀತಿಯ ಮಧುರ ದೃಶ್ಯಗಳನ್ನು ಈಗಂತು ಸೋಶಿಯಲ್ ಮೀಡಿಯಾದಲ್ಲಿ ಸದಾ ಕಾಣಸಿಗುತ್ತವೆ. ಸಹಜವಾಗಿಯೇ ಈ ಎಲ್ಲಾ ದೃಶ್ಯಗಳು ನಮ್ಮ ಮನಸ್ಸಿನ ಆನಂದವನ್ನು ಹೆಚ್ಚು ಮಾಡುತ್ತವೆ.

ಇದು ಹಕ್ಕಿ ಮತ್ತು ಶ್ವಾನದ ನಡುವಣ ಗೆಳೆತನ, ಕಾಳಜಿಯ ಅದ್ಭುತ ದೃಶ್ಯ. ಸದ್ಯ ಈ ಮನೋಹರ ದೃಶ್ಯ ನೆಟ್ಟಿಗರ ಕಣ್ಮನ ಸೆಳೆದಿದೆ.

ವಿಡಿಯೋದಲ್ಲಿ ಏನಿದೆ?

ಹಕ್ಕಿಯೊಂದು ಮಲಗಿರುವ ಶ್ವಾನದ ಮುಂಗಾಲನ್ನು ಹಿಡಿದುಕೊಂಡಿರುವ ದೃಶ್ಯದಿಂದ ವಿಡಿಯೋ ಶುರುವಾಗುತ್ತದೆ. ಹಕ್ಕಿ ಶ್ವಾನದ ಕಾಲನ್ನು ಹಿಡಿದುಕೊಂಡು ಮಗುವಿನಂತೆ ಮಲಗುತ್ತದೆ. ಶ್ವಾನ ಕೂಡ ಹಕ್ಕಿಯನ್ನು ಮಗುವಿನಂತೆ ಕಾಳಜಿ ಮಾಡುವುದನ್ನು ಇಲ್ಲಿ ನೋಡಬಹುದಾಗಿದೆ.

@buitengebieden ಎಂಬ ಟ್ವಿಟ್ಟರ್ ಖಾತೆಯಲ್ಲಿ 22 ಸೆಕೆಂಡಿನ ಈ ದೃಶ್ಯ ಶೇರ್ ಆಗಿದೆ. ನೆಟ್ಟಿಗರು ಈ ಅಪರೂಪದ ಸ್ನೇಹಕ್ಕೆ ಪಿಧಾ ಆಗಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss