SHOCKING | ಹೈದರಾಬಾದ್ ಮಾದರಿಯ ಘಟನೆ ರಿಪೀಟ್, ಗುಜರಾತ್‌ನಲ್ಲಿ ನಾಯಿ ದಾಳಿಗೊಳಗಾಗಿದ್ದ ಮಗು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್‌ನಲ್ಲಿ ಇತ್ತೀಚೆಗಷ್ಟೇ ನಾಲ್ಕು ವರ್ಷದ ಮಗುವನ್ನು ಬೀದಿನಾಯಿಗಳು ಕಚ್ಚಿ ಕೊಂದಿದ್ದವು, ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಮತ್ತೆ ಇಂಥದ್ದೇ ಪ್ರಕರಣ ಮರುಕಳಿಸಿದ್ದು, ಗುಜರಾತ್‌ನಲ್ಲಿ ಬೀದಿ ನಾಯಿ ದಾಳಿಗೆ ಒಳಗಾಗಿದ್ದ ಬಾಲಕ ಮೃತಪಟ್ಟಿದ್ದಾನೆ.

ಗುಜರಾತ್‌ನ ಡೈಮಂಡ್ ಬೌರ್ಸ್ ಬಳಿ ವಾಸಿಸುತ್ತಿದ್ದ ದಿನಗೂಲಿ ನೌಕರರಾದ ರವಿಕುಮಾರ್ ಮಗನ ಮೇಲೆ ನಾಯಿ ದಾಳಿ ಮಾಡಿತ್ತು, 30-40ಕ್ಕೂ ಹೆಚ್ಚು ಗಾಯಗಳಾಗಿದ್ದ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಮಗುವಿನ ಕೈ, ಕಾಲು, ಎದೆ ಭಾಗ, ಹಿಂಭಾಗ ಎಲ್ಲೆಡೆ ಗಾಯಗಳಾಗಿತ್ತು. ಸಣ್ಣ ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗಿತ್ತು. ಮಗು ಚೇತರಿಕೆ ಕಾಣುತ್ತಿದ್ದೆ ಎನ್ನುವಷ್ಟರಲ್ಲಿ ಕಂದಮ್ಮ ಏಕಾಏಕಿ ಮೃತಪಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!