ವಿಜಯನಗರದಲ್ಲಿ ಹಂಪಿ ಉತ್ಸವಕ್ಕೆ ಹರಿದು ಬಂದ‌ ಜನಸಾಗರ!

ಹೊಸ ದಿಗಂತ ವರದಿ, ಹಂಪಿ:

ನೂತನ ವಿಜಯನಗರ ಜಿಲ್ಲೆಯಾದ ಬಳಿಕ ಮೊದಲ ಬಾರಿಗೆ ಆಯೋಜಿಸಿದ ಹಂಪಿ ಉತ್ಸವದ (ಶನಿವಾರ) ಎರಡನೇ ದಿನ ಜನಸಾಗರವೇ ಹರಿದು ಬಂತು.

ಉತ್ಸವದ ಮೊದಲ ದಿನ ಗಾಯತ್ರಿ ಪೀಠ‌ ಮುಖ್ಯವೇದಿಕೆಯಲ್ಲಿ ಜನರ ಪ್ರಮಾಣ ತೀರಾ ಕಡಿಮೆಯಾಗಿತ್ತು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಉತ್ಸವ ಉದ್ಘಾಟನೆ ಮಾಡುವ ವೇಳೆ ಜನರು ಕಡಿಮೆಯಾಗಿರುವುದನ್ನು ಕಂಡು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಮುಖ್ಯಮಂತ್ರಿಗಳು ವೇದಿಕೆಯಿಂದ ನಿರ್ಗಮಿಸಿದ ಬಳಿಕ ಸಭೆಯಲ್ಲೇ ಜಿಲ್ಲಾಧಿಕಾರಿ ಗಳೊಂದಿಗೆ ಚೆರ್ಚಿಸಿದರು.

ಉತ್ಸವದಲ್ಲಿ ಪ್ರತಿ ವರ್ಷ ಜನರು ತುಂಬಿ ತುಳುಕುತ್ತಿದ್ದರು. ಈ ವರ್ಷ ತೀರಾ ಕಡಿಮೆಯಾಗಿದ್ದು, ಯಾಕೆ, ಇದು ಜನರ ಉತ್ಸವ ಎಲ್ಲ ಜನರು ಉತ್ಸವ ವೀಕ್ಷಣೆಗೆ ಮುಕ್ತವಾಗಿ ಅವಕಾಶ ಕಲ್ಪಿಸಿ, ಅಲ್ಲಲ್ಲಿ ಅಳವಡಿಸಿದ ಬ್ಯಾರಿಕೇಡ್ ಗಳನ್ನು ತೆರವುಗೊಳಿಸಿ ಜನರು ಮುಕ್ತವಾಗಿ ಸಭೆಯತ್ತ ಬರಲು ಅವಕಾಶ ಕಲ್ಪಿಸಿ ಎಂದು ಸಚಿವರ ಆನಂದ್ ಸಿಂಗ್ ಅವರು ಸೂಚಿಸಿದ್ದರು. ಎರಡನೇ ದಿನದ ಉತ್ಸವದಲ್ಲಿ ಬೆಳಿಗ್ಗೆಯಿಂದಲೇ ಜನರು ತಂಡೋಪ ತಂಡವಾಗಿ ಆಗಮಿಸಿದರು.

ಕುಣಿದು ಕುಪ್ಪಳಿಸಿದ ಜನರು: ಉತ್ಸವದ ಎರಡನೇ ದಿನವಾದ ಶನಿವಾರ ಸಾವಿರಾರು ಸಂಖ್ಯೆಯಲ್ಲಿ ಜನರು, ಪ್ರವಾಸಿಗರು, ಆಗಮಿಸಿ ಉತ್ಸವಕ್ಕೆ ಜೀವಕಳೆ ತಂದರು.
ವಾರಾಂತ್ಯವಾದ ಶನಿವಾರ ಬೆಳಿಗ್ಗೆಯಿಂದಲೇ, ಜನರು, ಪ್ರವಾಸಿಗರ ದಂಡೇ ಹಂಪಿಯತ್ತ ಹರಿದು ಬಂತು. ವಿವಿಧ ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿ ಪ್ರದರ್ಶನವನ್ನು ಕಂಡು ಮಾಹಿತಿ ಪಡೆದುಕೊಂಡರು.
ಇಳಿ ಸಂಜೆ ವೇಳೆಯಲ್ಲಿ ಹಂಪಿಯ ಪರಿಸರ ಪ್ರವಾಸಿಗರಿಂದ, ಸಾರ್ವಜನಿಕರಿಂದ ತುಂಬಿತ್ತು. ಗಾಯತ್ರಿ ಪೀಠ ಮುಖ್ಯವೇದಿಕೆ ಸೇರಿ ನಾನಾ ವೇದಿಕೆಯತ್ತ ಜನರು ತೆರಳಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

ಬಣ್ಣ ಬಣ್ಣದ ದೀಪಗಳಿಂದ ಕಂಗೊಳಕಸಿದ ಹಂಪಿ: ಉತ್ಸವ ಹಿನ್ನೆಲೆ ಹಂಪಿ, ಕಮಲಾಪೂರ ಸೇರಿದಂತೆ ಎಲ್ಲ ಕಡೆಗಳಲ್ಲೂ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ನೋಡುಗರ ಗಮನಸೆಳೆಯಿತು.

ಸಂಜೆಯಾಗುತ್ತಿದ್ದಂತೆ ಬಣ್ಣ ಬಣ್ಣದ ವಿದ್ಯುತ್ ದೀಪದ ಬೆಳಕಿನಲ್ಲಿ ಮಿಂದೆದ್ದ ಸ್ಮಾರಕಗಳು ನೋಡುಗರ ಗಮನಸೆಳೆದವು. ಕಲಾವಿಧ ರಘು ಧಿಕ್ಷೀತ್ ಸೇರಿದಂತೆ ವಿವಿಧ ಕಲಾವಿಧರು ನಡೆಸಿದ ಕಾರ್ಯಕ್ರಮಗಳನ್ನು ವೀಕ್ಷಿಸಿ ಜನರು ಸಂಭ್ರಮಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!