ಸೆಮಿಫೈನಲ್‌ಗೂ ಮುನ್ನ ತಂಡಕ್ಕೆ ಶಾಕ್, ಕ್ಯಾಪ್ಟನ್ ರೋಹಿತ್ ಶರ್ಮಾಗೆ ಇಂಜುರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಸಿಸಿ ಟಿ20 ವಿಶ್ವಕಪ್ 2022 ಟೂರ್ನಿ ಅಂತಿಮ ಹಂತಕ್ಕೆ ಬಂದಿದ್ದು, ಸೆಮಿ ಫೈನಲ್ ಪಂದ್ಯಕ್ಕೂ ಮುಂದ ತಂಡಕ್ಕೆ ಆಘಾತವಾಗಿದೆ.

ಸ್ಟಾರ್ ಬ್ಯಾಟರ್ ಟೀಂ ಇಂಡಿಯಾ ಕ್ಯಾಪ್ಟನ್‌ಗೆ ಇಂಜುರಿಯಾಗಿದೆ. ಇಂಗ್ಲೆಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯಕ್ಕಾಗಿ ಈಗಾಗಲೇ ಅಡಿಲೇಡ್‌ಗೆ ಭಾರತ ತಂಡ ಬಂದಿಳಿದಿದೆ. ಅಭ್ಯಾಸ ಮಾಡುವ ವೇಳೆ ರೋಹಿತ್ ಶರ್ಮಾ ಇಂಜುರಿಗೆ ತುತ್ತಾಗಿದ್ದಾರೆ. ಬಲಗೈಗೆ ಪೆಟ್ಟಾಗಿದ್ದು, ಅಭ್ಯಾಸ ಪಂದ್ಯ ಅರ್ಧದಲ್ಲೇ ಬಿಟ್ಟು ತೆರಳಿದ್ದಾರೆ. ತಕ್ಷಣ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ನೋವು ಹೆಚ್ಚಿದ್ದ ಕಾರಣ ಬ್ಯಾಟಿಂಗ್ ಮಾಡದೇ ತೆರಳಿದ್ದಾರೆ.

ಟೀಂ ಕ್ಯಾಪ್ಟನ್‌ಗೆ ಇಂಜುರಿ ಆಗಿರುವುದರಿಂದ ತಂಡ ಆತಂಕದಲ್ಲಿದೆ. ಈವರೆಗೂ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ನೆಟ್‌ನಿಂದ ನಿರ್ಗಮಿಸಿದ ರೋಹಿತ್ ಕೈಗೆ ಐಸ್‌ಬಾಕ್ಸ್‌ಕಟ್ಟಿದ್ದು, ಚಿಕಿತ್ಸೆಗೆ ಕರೆದೊಯ್ಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!