ಹೊಸದಿಗಂತ ವರದಿ,ಮದ್ದೂರು:
ರಜೆ ಹಿನ್ನಲೆಯಲ್ಲಿ ಗ್ರಾಮಕ್ಕೆ ಬಂದಿದ್ದ ಸೈನಿಕನೋರ್ವ ತಮ್ಮ ನಿವಾಸದ ಮಹಡಿಯ ಮೆಟ್ಟಿಲಿನಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತೀವ್ರ ಪೆಟ್ಟಾಗಿ ಚಿಕಿತ್ಸೆ ಫಲಿಸದೆ ಮೃತ ಪಟ್ಟಿರುವ ಘಟನೆ ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಚಾಮನಹಳ್ಳಿ ಗ್ರಾಮದ ಕೆಂಪಯ್ಯ ರವರ ಪುತ್ರ ಸಿ.ಕೆ.ಸಂದೀಪ್‌ಕುಮಾರ್(38) ಮೃತ ಯೋಧನಾಗಿದ್ದು ಹರಿಯಾಣದ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು ಕಳೆದ ಒಂದು ವಾರದ ಹಿಂದೆ ರಜೆ ಮೇರೆಗೆ ಗ್ರಾಮಕ್ಕೆ ಬಂದಿದ್ದರೆನ್ನಲಾಗಿದೆ.
ಬುಧವಾರ ತಡರಾತ್ರಿ ತಮ್ಮ ಮನೆಯ ಮೆಟ್ಟಿಲಿನಲ್ಲಿ ಜಾರಿಬಿದ್ದು ತಲೆಗೆ ಪೆಟ್ಟಾದ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ಮದ್ದೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರಿಗೆ ಪತ್ನಿ ಸ್ಪೂರ್ತಿ ಮತ್ತು ಇಬ್ಬರು ಗಂಡು ಮಕ್ಕಳಿದ್ದು ಘಟನೆ ಸಂಬಂಧ ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.