ಹೊಸದಿಗಂತ ಡಿಜಿಟಲ್ ಡೆಸ್ಕ್
ಗುಜರಾತ್ ಜಿಲ್ಲೆಯ ಕಡಿ ಪಟ್ಟಣದ ಬಳಿಯ ವಿಸಾತ್ಪುರ ಗ್ರಾಮದ ಶಾಲಾ ಮೈದಾನದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವ ವೇಳೆ ದಕ್ಷಿಣ ಕೊರಿಯಾದ ವ್ಯಕ್ತಿ ನೆಲಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.
ಶಿನ್ ಬೈಯೋಂಗ್ ಮೂನ್ ಎಂಬವರು ಪ್ಯಾರಾಗ್ಲೈಡರ್ನ ಮೇಲ್ಛಾವಣಿಯನ್ನು ಸರಿಯಾಗಿ ತೆರೆಯಲು ಆಗದೇ ನಿಯಂತ್ರಣ ತಪ್ಪಿ ಸುಮಾರು 50 ಅಡಿ ಎತ್ತರದಿಂದ ಬಿದಿದ್ದಾರೆ ಎಂದು ಕಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನಿಕುಂಜ್ ಪಟೇಲ್ ತಿಳಿಸಿದ್ದಾರೆ.
ವೈದ್ಯರ ಪ್ರಕಾರ, ಆ ವ್ಯಕ್ತಿಯು ಬಿದ್ದು ಆಘಾತದಿಂದಾಗಿ ಹೃದಯ ಸ್ತಂಭನಕ್ಕೆ ಒಳಗಾದನು ಎಂದು ಅಧಿಕಾರಿ ತಿಳಿಸಿದ್ದಾರೆ.