ಆಕಾಶದಲ್ಲಿ ಇಂದು ಈ ಅದ್ಭುತವನ್ನು ತಪ್ಪದೇ ನೋಡಿ: ಭೂಮಿ ಸಮೀಪಕ್ಕೆ ಜೆಮಿನಿಡ್ಸ್ ಉಲ್ಕಾಪಾತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬುಧವಾರ (ಡಿಸೆಂಬರ್ 14, 2022) ಇಂದು ರಾತ್ರಿ ಆಕಾಶದಲ್ಲಿ ಒಂದು ಅದ್ಭುತ ದೃಶ್ಯವು ಬಹಿರಂಗಗೊಳ್ಳಲಿದೆ. ಜೆಮಿನಿಡ್ಸ್ ಉಲ್ಕಾಪಾತ ಭೂಮಿಗೆ ತೀರಾ ಹತ್ತಿರವಾಗಿ ಬರಲಿದ್ದು, ದೂರದರ್ಶಕದ ಅಗತ್ಯವಿಲ್ಲದೇ ನೋಡಬಹುದು ಅಂತಿದಾರೆ ಖಗೋಳ ಶಾಸ್ತ್ರಜ್ಞರು.

ಡಿಸೆಂಬರ್ 4 ರಿಂದ ಆಕಾಶದಲ್ಲಿ ಗೋಚರಿಸುತ್ತಿರುವ ಜೆಮಿನಿಡ್ಸ್ ಉಲ್ಕಾಪಾತ ಬುಧವಾರ ರಾತ್ರಿ ತನ್ನ ಉತ್ತುಂಗವನ್ನು ತಲುಪಲಿದೆ. ಗಂಟೆಗೆ ಗರಿಷ್ಠ 150 ಉಲ್ಕೆಗಳು ಆಕಾಶದಲ್ಲಿ ಪವಾಡ ಸೃಷ್ಟಿಮಾಡಲಿವೆ. ಇದು ಅತ್ಯಂತ ಸುಂದರವಾಗಿ ಕಾಣುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಜೆಮಿನಿಡ್ಸ್ ಉಲ್ಕಾಪಾತದ ಅವಶೇಷಗಳು ಸೆಕೆಂಡಿಗೆ 70 ಕಿಲೋಮೀಟರ್ ವೇಗದಲ್ಲಿ ಭೂಮಿಯ ವಾತಾವರಣವನ್ನು ಪ್ರವೇಶಿಸಿದಾಗ ಪ್ರಕಾಶಮಾನವಾಗಿ ಉರಿಯುತ್ತವೆ.

ದೂರದರ್ಶಕವಿಲ್ಲದೆ ಇವುಗಳನ್ನು ವೀಕ್ಷಿಸಲು ಸಾಧ್ಯ ಎಂದು ಖಗೋಳಶಾಸ್ತ್ರಜ್ಞರು ಹೇಳುತ್ತಾರೆ. ಭೂಮಿಯ ಮೇಲೆ ಎಲ್ಲಿಂದಲಾದರೂ ನೋಡಬಹುದು. ಈ ಪವಾಡವನ್ನು ನೇರವಾಗಿ ನೋಡುವುದರಿಂದ ಯಾವುದೇ ಅಪಾಯವಿಲ್ಲ ಜನರು ಇದನ್ನು ನೋಡಿ ಆನಂದಿಸಬಹುದು ಎಂದು ಸೂಚಿಸಲಾಗಿದೆ. ಬುಧವಾರ ಸಂಜೆ 6.30ಕ್ಕೆ ಉಲ್ಕಾಪಾತದ ಗರಿಷ್ಠ ಮಟ್ಟ ತಲುಪಲಿದೆ ರಾತ್ರಿ 9 ಗಂಟೆಗೆ ಇನ್ನಷ್ಟು ಸ್ಪಷ್ಟವಾಗಿ ಗೋಚರಿಸಲಿದೆ ಎನ್ನಲಾಗಿದೆ. ಆಕಾಶದಲ್ಲಿನ ಈ ವೈಭವವನ್ನು ವೀಕ್ಷಿಸುವ ಅವಕಾಶವನ್ನು ಯಾರೂ ಕಳೆದುಕೊಳ್ಳಬಾರದು ಎಂದು ಖಗೋಳಶಾಸ್ತ್ರಜ್ಞರು ಸಲಹೆ ನೀಡಿದ್ದಾರೆ. ಉಲ್ಕಾಪಾತವು ಮಂಗಳವಾರ, ಡಿಸೆಂಬರ್ 13 ರಂದು ರಾತ್ರಿ 11 ಗಂಟೆಗೆ ಪ್ರಾರಂಭವಾಗಿ  ಬುಧವಾರ ಮುಂಜಾನೆ 3 ಗಂಟೆಯವರೆಗೆ ಗೋಚರಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!