ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾವೇರಿಯ ಶಿಗ್ಗಾಂವಿ ಬಳಿ ಹೆದ್ದಾರಿಯಲ್ಲಿ ಊರಿಗೆ ಹೋಗೋಕೆ ಬಸ್‌ಗಾಗಿ ಕಾಯ್ತಾ ನಿಂತಿದ್ದ ಜನರ ಮೇಲೆ ಕಾರ್ ಹರಿದಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ಬಳಿ ಬಸ್‌ಗಾಗಿ ಜನರು ಕಾಯುತ್ತಾ ನಿಂತಿದ್ದರು. ವೇಗವಾಗಿ ಬಂದ ಕಾರು ಏಕಾಏಕಿ ಇಬ್ಬರಿಗೂ ಗುದ್ದಿದ್ದು, ಸ್ಥಳದಲ್ಲೇ ವಿರುಪಾಕ್ಷಪ್ಪ ಕಾಳಿ ಮೃತಪಟ್ಟಿದ್ದಾರೆ. ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಬಾರದ ಕಾರಣ ಚಿದಾನಂದ ಕುರುಬರ ಮೃತಪಟ್ಟಿದ್ದಾರೆ.
ಆಂಬುಲೆನ್ಸ್ ಸಮಯಕ್ಕೆ ಸರಿಯಾಗಿ ಬಂದಿದ್ದರೆ ಚಿದಂಬರ ಅವರ ಜೀವ ಉಳಿಯುತ್ತಿತ್ತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದ್ದಾರೆ.ತಡಸ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಸುಧಾರಿಸಿದ್ದಾರೆ.